ಕಟ್ಟಡ ಕುಸಿತ: ತಪ್ಪಿದ ಅನಾಹುತ

233

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ನಗರದ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಇಂದು ಧರೆಗೆ ಉರುಳಿದೆ. ಕಣ್ಣೆದ್ದುರಲ್ಲೇ ಮನೆ ಬೀಳುತ್ತಿರುವುದನ್ನು ನೋಡಿದ ಜನರಲ್ಲಿ ಸಾಕಷ್ಟು ಭಯ ಮೂಡಿತ್ತು. ಅದೃಷ್ಟವಶಾತ್ ಕಟ್ಟಡದಲ್ಲಿ ಯಾರೂ ಇಲ್ಲದೆ ಇರುವುದರಿಂದ ಅನಾಹುತವೊಂದು ತಪ್ಪಿದೆ.

ತುಂಬಾ ಹಳೆ ಕಟ್ಟಡವಾಗಿದೆ. ಇಲ್ಲಿ ಯಾವುದೇ ಕುಟುಂಬದವರು ವಾಸಿಸುತ್ತಿರಲಿಲ್ಲ. ಆದರೆ, ಸುಮಾರು 30-40 ಮಂದಿ ಮೆಟ್ರೋ ಕಾರ್ಮಿಕರು ವಾಸವಾಗಿದ್ದರು. ಕಟ್ಟಡ ನಿಧಾನವಾಗಿ ವಾಲುತ್ತಿರುವ ಬಗ್ಗೆ ಸ್ಥಳೀಯರು ಮಾಲೀಕರಿಗೆ ಹೇಳಿದ್ದಾರೆ. ಅದಕ್ಕೆ ಅವರು ಸರಿಯಾಗಿ ಸ್ಪಂದಿಸಿಲ್ಲವಂತೆ. ಈ ಘಟನೆ ನಡೆದ ಸಂದರ್ಭದಲ್ಲಿ ಕಟ್ಟಡದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಒಂದು ವೇಳೆ ರಾತ್ರಿ ಸಂಭವಿಸಿದ್ದರೆ ದೊಡ್ಡ ದುರಂತ ನಡೆಯುತಿತ್ತು.




Leave a Reply

Your email address will not be published. Required fields are marked *

error: Content is protected !!