‘ಸಾನಿ ಕಾಯಿದಂ’ ಫಸ್ಟ್ ಲುಕ್ ರಿಲೀಸ್

266

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟಿ ಕೀರ್ತಿ ಸುರೇಶ ಮುಖ್ಯಭೂಮಿಕೆಯಲ್ಲಿರುವ ಸಾನಿ ಕಾಯಿದಂ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಫಸ್ಟ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ನಟಿ ಕೀರ್ತಿ ಸುರೇಶ ಜೊತೆ ನಟ ಸೆಲ್ವ್ ರಾಘವನ್ ಸಹ ಇದ್ದಾರೆ.

ಈ ಚಿತ್ರವನ್ನ ಅರುಣ ಮತೇಶ್ವರನ್ ನಿರ್ದೇಶನ ಮಾಡ್ತಿದ್ದಾರೆ. ಪೋಸ್ಟರ್ ನೋಡಿದ್ರೆ ಕ್ರೈಂ ಥ್ರಿಲ್ಲರ್ ಕಥೆಯಿರುವುದು ತಿಳಿಯುತ್ತೆ. ಹತ್ಯೆಗೆ ಬೇಕಾಗಿರುವ ಚಾಕು, ಚೂರಿ ಸೇರಿ ಇತರೆ ವಸ್ತುಗಳಿವೆ. ನಟ ಸೆಲ್ವ್ ರಾಘವನ್ ಕೈ ರಕ್ತದಿಂದ ಕೂಡಿದೆ. ಅವರು ಕುಳಿತಿರುವ ಸ್ಟೈಲ್ ನೋಡಿದ್ರೆ ಪೊಲೀಸರ ಕೈಯಲ್ಲಿ ಸಿಕ್ಕಿರುವಂತಿದೆ. ಹೀಗಾಗಿ ಒಂದಿಷ್ಟು ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!