ದಳಪತಿ ವಿಜಯ್-ಕೀರ್ತಿ ಸುರೇಶ್ ಮದುವೆ ನಿಜವೇ?

224

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮಿಳು ಸ್ಟಾರ್ ನಟ ದಳಪತಿ ವಿಜಯ್ ಹಾಗೂ ನಟಿ ಕೀರ್ತಿ ಸುರೇಶ್ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಜೋರಾಗಿದೆ. ಕೆಲ ದಿನಗಳಿಂದ ಈ ಗಾಸಿಪ್ ಎಲ್ಲೆಡೆ ಹಬ್ಬಿದೆ. ನಟ ವಿಜಯ್ ಪತ್ನಿ ಸಂಗೀತಾಗೆ ಡಿವೋರ್ಸ್ ನೀಡುತ್ತಾರೆ. ಕೀರ್ತಿ ಜೊತೆಗೆ 2ನೇ ಮದುವೆಯಾಗುತ್ತಾರೆ ಎಂದು ಹಬ್ಬಿಸಲಾಗಿದೆ.

ಇದಕ್ಕೆ ನಟಿ ಕೀರ್ತಿ ಸುರೇಶ್ ತಾಯಿ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ಸುಳ್ಳ ವಿಚಾರ. ಇದು ಕೇವಲ ಪ್ರಚಾರದ ಗಾಳಿ ಸುದ್ದಿ. ಮಗಳ ಮದುವೆ ಬಗ್ಗೆ ಯಾವುದೇ ಪ್ಲಾನ್ ಮಾಡಿಲ್ಲ ಎಂದು ಹೇಳಿದ್ದಾರೆ.

ಈ ವಿಚಾರವಾಗಿ ನಟ ವಿಜಯ್ ಆಗಲಿ, ನಟಿ ಕೀರ್ತಿ ಸುರೇಶ್ ಆಗಲಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಆದರೂ ಇವರ ಬಗ್ಗೆ ಚರ್ಚೆ ನಡೆದಿದೆ. ಭರವ ಹಾಗೂ ಸರ್ಕಾರ್ ಚಿತ್ರಗಳಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ. ಈಗ ನೋಡಿದರೆ ಮದುವೆ ಮಾತುಗಳು ಕೇಳಿ ಬರುತ್ತಿವೆ.




Leave a Reply

Your email address will not be published. Required fields are marked *

error: Content is protected !!