ಧೋನಿ ನಿರ್ಮಾಣದ ಚಿತ್ರದಲ್ಲಿ ತಳಪತಿ ವಿಜಯ್!

210

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಟೀಂ ಇಂಡಿಯಾ ಮಾಜಿ ನಾಯಕ, ಸಿಎಸ್ಕೆ ಕ್ಯಾಪ್ಟನ್ ಎಂ.ಎಸ್ ಧೋನಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದು ಗೊತ್ತಿರುವ ವಿಚಾರ. ಧೋನಿ ಪ್ರೊಡೆಕ್ಷನ್ ಹೆಸರಿನ ಸಿನಿಮಾ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಪಕರಾಗುತ್ತಿದ್ದಾರೆ ಮಹಿ.

ಧೋನಿ ನಿರ್ಮಾಣದ ಮೊದಲ ಚಿತ್ರದಲ್ಲಿ ಕಾಲಿವುಡ್ ತಳಪತಿ ವಿಜಯ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇಂದು ನಟ ವಿಜಯ್ 48ನೇ ಹುಟ್ಟು ಹಬ್ಬ. ಇದರ ಪ್ರಯುಕ್ತ ಇದೊಂದು ಅನೌನ್ಸ್ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ವಿಜಯ್ ಹುಟ್ಟು ಹಬ್ಬದ ಹಿನ್ನೆಲೆ ಧೋನಿ, ವಿಜಯ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿಯೂ ಧೋನಿ ಸಣ್ಣ ಪಾತ್ರದಲ್ಲಿ ಬಂದು ಹೋಗಲಿದ್ದಾರಂತೆ.

ಇನ್ನು ಈ ಚಿತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಆರಂಭದಿಂದಲೇ ಕೇಳಿ ಬರುತ್ತಿದೆ. ಹೀಗಾಗಿ ಧೋನಿ, ವಿಜಯ್, ನಯನತಾರಾ ಅಭಿಮಾನಿಗಳಿಗೆ ಭರ್ಜರಿ ಧಮಾಕ್ ಇರಲಿದೆ. ಈಗಾಗ್ಲೇ ಟೀಂ ಇಂಡಿಯಾದ ಎಲ್ಲ ಫಾರ್ಮ್ ಕ್ರಿಕೆಟ್ ಗೆ ವಿದಾಯ ಹೇಳಿರುವ ಧೋನಿ 2023ರ ಐಪಿಎಲ್ ಟೂರ್ನಿ ಲಾಸ್ಟ್ ಎಂದು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!