ಪ್ರಜಾಸ್ತ್ರ ಕ್ರೀಡಾ ಸುದ್ದಿ
ಇಂಡಿಯನ್ ಕ್ರಿಕೆಟ್ ಟೀಂನ ಕೂಲ್ ಕ್ಯಾಪ್ಟನ್ ಅಂತಾನೆ ಕರೆಸಿಕೊಳ್ಳುತ್ತಿದ್ದ, ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತಲೈವಾಗೆ ಜುಲೈ 7ರಂದು 42 ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಅವರ ಅಭಿಮಾನಿಗಳು ಬರೋಬ್ಬರಿ 52 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದಾರೆ.
ಟೀಂ ಇಂಡಿಯಾದ ಜರ್ಸಿ ಧರಿಸಿರುವ 52 ಅಡಿ ಎತ್ತದ ಕಟೌಟ್ ನ್ನು ಹೈದ್ರಾಬಾದ್ ನಲ್ಲಿ ನಿಲ್ಲಿಸಲಾಗಿದೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಧೋನಿ ಅಭಿಮಾನಿಗಳು ಸೇರಿ ಕ್ರಿಕೆಟ್ ಪ್ರೇಮಿಗಳು ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.
ಕಳೆದ ವರ್ಷ 41ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ವಿಜಯವಾಡದಲ್ಲಿ ಅಭಿಮಾನಿಯೊಬ್ಬ 41 ಅಡಿ ಎತ್ತರದ ಕಟೌಟ್ ನಿಲ್ಲಿಸಿದ್ದನ್ನು ಇಲ್ಲಿ ಸರ್ಮಿಸಿಕೊಳ್ಳಬಹುದು.