14 ವರ್ಷಗಳ ನಂತರ ಸ್ಕ್ರೀನ್ ಮೇಲೆ ವಿಜಯ್-ತ್ರಿಶಾ

230

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ವಾರಿಸು ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ದಳಪತಿ ವಿಜಯ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್, ಇವರ ಮುಂದಿನ ಸಿನಿಮಾ ಘೋಷಣೆಯಾಗಿದೆ. ಆದರೆ, ಟೈಟಲ್ ಅನೌನ್ಸ್ ಮಾಡಿಲ್ಲ. ದಳಪತಿ 67 ಚಿತ್ರಕ್ಕೆ ನಟಿ ತ್ರಿಶಾ ಎಂಟ್ರಿಯಾಗಿದೆ.

ಪ್ರೊಡಕ್ಷನ್ ಹೌಸ್ ಸೆವನ್ ಸ್ಕ್ರೀನ್ ಸ್ಟುಡಿಯೋಸ್ ಈ ಕುರಿತು ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ನನ್ನ ಕೆಲವು ನೆಚ್ಚಿನ ಜನರ ಹಾಗೂ ಅಪಾರ ಪ್ರತಿಭಾವಂತ ತಂಡವನ್ನು ಒಳಗೊಂಡಿರುವ ಈ ಐಕಾನಿಯ ಯೋಜನೆಯ ಭಾಗವಾಗಿರುವುದಕ್ಕೆ ಕೃತಜ್ಞತೆಗಳು ಎಂದು ಟ್ವೀಟ್ ಮಾಡಲಾಗಿದೆ.

ನಟ ವಿಜಯ್ ಹಾಗೂ ನಟಿ ತ್ರಿಶಾ 14 ವರ್ಷಗಳ ಬಳಿಕ ಮತ್ತೆ ಆನ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. 2004ರಲ್ಲಿ ಗಿಲ್ಲಿ, 2005ರಲ್ಲಿ ತಿರುಪತಿ, 2006ರಲ್ಲಿ ಅಥಿ ಹಾಗೂ 2008ರಲ್ಲಿ ಕುರ್ವಿ ಅನ್ನೋ ಚಿತ್ರದಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಅಲ್ಲಿಂದ ಇಲ್ಲಿಯವರೆಗೂ ಮತ್ತೆ ನಟಿಸಿಲ್ಲ. ಹೀಗಾಗಿ ಬರೋಬ್ಬರಿ 14 ವರ್ಷಗಳ ನಂತರ ವಿಜಯ್-ತ್ರಿಶಾ ನಟಿಸಲು ಸಜ್ಜಾಗಿದ್ದಾರೆ.

ಇನ್ನು ಬಾಲಿವುಡ್ ನಟ ಸಂಜಯ್ ದತ್ತ ಹಾಗೂ ಮ್ಯಾಥ್ಯೂ ಥಾಮಸ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್ ಸೇರಿ ಅನೇಕರ ತಾರಾಬಳಗವಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!