‘ಕವಿವಿ’ಯಲ್ಲಿ ಅತಿಥಿ, ಸಹಾಯಕ ಉಪನ್ಯಾಸಕರಿಗೆ ಅರ್ಜಿ ಆಹ್ವಾನ

428

ಪ್ರಜಾಸ್ತ್ರ ಸುದ್ದಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗಗಳಿಗೆ ಹಾಗೂ ಸ್ನಾತಕೋತ್ತರ ಕೇಂದ್ರಗಳಿಗೆ, 2020-21ನೇ ಸಾಲಿನ ಎಲ್ಲ ತರಗತಿಗಳಿಗೆ ಅಗತ್ಯ ಅನುಸಾರವಾಗಿ ಅತಿಥಿ ಹಾಗೂ ಸಹಾಯಕ ಉಪನ್ಯಾಸಕರ ಅರ್ಜಿಯನ್ನ ಕರೆಯಲಾಗಿದೆ.

ಯುಜಿಸಿ ನಿಯಮಗಳ ಪ್ರಕಾರ ನೆಟ್, ಸೆಟ್, ಪಿಎಚ್ ಡಿ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗಿದ್ದು, ಜೂನ್ 27ರ ಒಳಗೆ ನಿಗದಿತ ಅರ್ಜಿಯೊಂದಿಗೆ ಸೂಕ್ತ ಮಾಹಿತಿಯನ್ನ ಭರ್ತಿ ಮಾಡಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ WWW.kud.ac.in ವೆಬ್ ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ.





Leave a Reply

Your email address will not be published. Required fields are marked *

error: Content is protected !!