ಜೂ.7ರಂದು ಕವಿವಿ 72ನೇ ಘಟಿಕೋತ್ಸವ

205

ಪ್ರಜಾಸ್ತ್ರ ಸುದ್ದಿ

ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ 72ನೇ ಘಟಿಕೋತ್ಸವ ಸಮಾರಂಭ ಜೂನ್ 7ರಂದು ನಡೆಯಲಿದೆ. ಅಂದು ಸ್ವರ್ಣ ಪದಕ ಪಡೆದ ಪದವಿ ವಿದ್ಯಾರ್ಥಿಗಳೊಂದಿಗೆ ಈ ವೇಳೆ ಪಿ.ಎಚ್.ಡಿ ಪದವಿ ಪ್ರಮಾಣವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಪದವಿ ಪ್ರಮಾಣ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇದಕ್ಕೂ ಪೂರ್ವದಲ್ಲಿ ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಜೂನ್ 8ರಂದು ಗಾಂಧಿ ಭವನದಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಕಾರ್ಯಕ್ರಮದಲ್ಲಿ ಬದಲಾವಣೆಯಾಗಿ, ಜೂನ್ 7ರಂದು ನಡೆಯುವ ಘಟಿಕೋತ್ಸವದಲ್ಲಿ ಪಿ.ಎಚ್.ಡಿ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಜರಿರಲು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಿದ ಪಿ.ಎಚ್.ಡಿ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯಲಿಚ್ಛಿಸುವವರು ಘಟಿಕೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿ, ವಿದ್ಯಾರ್ಥಿಯನಿಯರಿಗೆ  ಕಡ್ಡಾಯವಾಗಿ ಖಾದಿ ಬಿಳಿ ಉಡುಪುಗಳನ್ನು ಧರಿಸುವದರೊಂದಿಗೆ, ವಿಶ್ವವಿದ್ಯಾಲಯ ವಿತರಿಸಲಾಗುವ ಖಾದಿ ಶಾಲು ಧರಿಸಿ ಆಡಳಿತ ಕಚೇರಿಯ ಮುಂದೆ ದಿನಾಂಕ 07-06-2022 ರಂದು ಮಧ್ಯಾಹ್ನ 1:30ಕ್ಕೆ ಉಪಸ್ಥಿತರಿರಬೇಕು.

ಖಾದಿ ಶಾಲು ಪಡೆಯಲು ದಿನಾಂಕ ಜೂನ್ 6, ಸೋಮವಾರ ಪರೀಕ್ಷಾ ವಿಭಾಗದ ಕಚೇರಿಯಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 6 ಗಂಟೆಯ ವರೆಗೆ ಮತ್ತು ಜೂನ್ 7ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ 200 ರೂಪಾಯಿ ಶುಲ್ಕ ಭರಿಸಿ, ರಶಿದಿ ಪಡೆದು ಶಾಲನ್ನು ಪಡೆಯಬಹುದು ಎಂದು ಕವಿವಿ ಮೌಲ್ಯಮಾಪನ ಕುಲಸಚಿವರು ಅಧಿಸೂಚನೆಯಲ್ಲಿ ತಿಳಿಸದ್ದಾರೆ.




Leave a Reply

Your email address will not be published. Required fields are marked *

error: Content is protected !!