ಶ್ರೀಮಂತರ ಪರವಾದ ಬಜೆಟ್: ರಾಹುಲ್ ಗಾಂಧಿ

168

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್ ಬಗ್ಗೆ ವಿಪಕ್ಷಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಯಾವುದೇ ದೂರದೃಷ್ಟಿಯಿಲ್ಲ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿರುವ ಬಜೆಟ್ ಎಂದು ವಾಗ್ದಾಳಿ ನಡೆಸಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇದೊಂದು ಸ್ನೇಹಿತರ ಬಜೆಟ್ ಆಗಿದೆ. ಉದ್ಯೋಗ ಸೃಷ್ಟಿಸುವ ಯೋಜನೆ ಇಲ್ಲ, ಬೆಲೆ ಏರಿಕೆ ನಿಭಾಯಿಸುವ ಹಾಗೂ ಅಸಮಾನತೆಯನ್ನು ತಡೆಯುವ ಉದ್ದೇಶವಿಲ್ಲವೆಂದು ಹೇಳಿದ್ದಾರೆ. ಈ ಬಜೆಟ್ ಬರೀ ಶ್ರೀಮಂತರ ಪರವಾಗಿದೆ. ಬಡವರ ಪರವಾಗಿಲ್ಲ. ಇದು ಅಮೃತವಾದ ಕಾಲವಲ್ಲ. ಸ್ನೇಹಿತರ ಕಾಲ. ಪ್ರಧಾನಿ ಮೋದಿಗೆ ಇದರ ಬಗ್ಗೆ ಕಾಳಜಿ ಇಲ್ಲ ಎಂದಿದ್ದಾರೆ.

ಇನ್ನು ಶೇಕಡ 1ರಷ್ಟು ಇರುವ ಶ್ರೀಮಂತರು ಶೇಕಡ 40ರಷ್ಟು ಆಸ್ತಿ ಹೊಂದಿದ್ದಾರೆ. ಶೇಕಡ 50ರಷ್ಟು ಇರುವ ಬಡುವರು ಶೇ.64ರಷ್ಟು ಜಿಎಸ್ ಟಿ ಕಟ್ಟಬೇಕಿದೆ. ಶೇ.42ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಭಾರತದ ಭವಿಷ್ಯವನ್ನು ರೂಪಿಸುವ ಯಾವುದೇ ರೀತಿಯ ದಿಕ್ಸೂಚಿಯಿಲ್ಲ ಅನ್ನೋದು ಈ ಬಜೆಟ್ ಸಾಬೀತು ಪಡಿಸುತ್ತದೆ ಅಂತಾ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!