ಸೋನು ಸೂದ್ ಪಂಜಾಬ್ ರಾಯಭಾರಿ

276

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಸೋನು ಸೂದ್ ಅವರನ್ನ ಪಂಜಾಬ್ ರಾಜ್ಯದ ಚುನಾವಣಾ ರಾಯಭಾರಿಯಾಗಿ ನೇಮಕ ಮಾಡಲಾಗಿದೆ. ಭಾರತೀಯ ಚುನಾವಣಾ ಆಯೋಗ ನಟ ಸೋನು ಸೂದ್ ಅವರನ್ನ ನೇಮಿಸಿ ಆದೇಶ ಹೊರಡಿಸಿದೆ.

ಕರೋನಾ ಲಾಕ್ ಡೌನ್ ಟೈಂನಲ್ಲಿ ಸೋನು ಸೂದ್ ಮಾಡಿರುವ ಮಾನವೀಯ ಸೇವೆಯನ್ನ ಪರಿಗಣಿಸಿ, ಪಂಜಾಬ್ ಚುನಾವಣಾ ಅಧಿಕಾರಿ ಎಸ್.ಕರುಣಾ ರಾಜ್ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ರು. ಅದಕ್ಕೆ ಅನುಮೋದನೆ ಸಿಕ್ಕಿದೆ.

ಲಾಕ್ ಡೌನ್ ಟೈಂನಲ್ಲಿ ನಟ ಸೋನು ಸೂದ್ ದೇಶ್ಯಾದ್ಯಂತ ಸಾವಿರಾರು ಕಾರ್ಮಿಕರಿಗೆ, ಬಡವರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ಜೀವಗಳಿಗೆ ಸಹಾಯ ಮಾಡುವ ಮೂಲಕ ಮಾನವೀಯತೆಯ ಮೌಲ್ಯ ಹೆಚ್ಚಿಸಿದ್ರು. ಇದನ್ನ ಗಮನಿಸಿದ ವಿಶ್ವ ಸಂಸ್ಥೆ ಸಹ ಇವರನ್ನ ಗೌರವಿಸಿತು.




Leave a Reply

Your email address will not be published. Required fields are marked *

error: Content is protected !!