ಬುಲೆಟ್ ಪ್ರಕಾಶ ನಿಧನ: ಕುಟುಂಬಕ್ಕೆ ಡಿ ಬಾಸ್ ಸಾಥ್.. ಕಿಚ್ಚ ಬೇಸರದ ನುಡಿ..

407

ಚಂದನವನದ ಹಾಸ್ಯ ನಟ ಬುಲೆಟ್ ಪ್ರಕಾಶ ನಿನ್ನೆ ಸಂಜೆ ನಿಧನರಾಗಿದ್ದಾರೆ. ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಅಕಾಲಿಕ ನಿಧನ ಎಲ್ಲರಲ್ಲಿ ನೋವು ತಂದಿದೆ. ಕೇವಲ 44 ವಯಸ್ಸಿನಲ್ಲಿ ವಿಧಿವಶರಾಗಿದ್ದು ಗಾಂಧಿನಗರದ ಮಂದಿಗೆ ದುಃಖ ತಂದಿದೆ.

ಬುಲೆಟ್ ಪ್ರಕಾಶ ನಿಧನಕ್ಕೆ ಸಂತಾಪ ಸೂಚಿಸಿರುವ ದರ್ಶನ, ಅವರ ಕುಟುಂಬಕ್ಕೆ ಹೆಗಲು ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಅಂದ್ರೆ, ಬುಲೆಟ್ ಪ್ರಕಾಶ ಅವರ ಮಗಳ ಮದ್ವೆ ಜವಾಬ್ದಾರಿಯನ್ನ ಡಿ ಬಾಸ್ ವಹಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಆದ್ರೆ, ಈ ಬಗ್ಗೆ ನಟ ದರ್ಶನ ಎಲ್ಲಿಯೂ ಹೇಳಿಲ್ಲ. ಹೀಗಾಗಿ ಇದರ ಸತ್ಯಾಸತ್ಯತೆ ಏನು ಅನ್ನೋದು ಗೊತ್ತಿಲ್ಲ.

ಇನ್ನು ಕಿಚ್ಚ ಸುದೀಪ ಸಹ ಸಂತಾಪ ಸೂಚಿಸಿದ್ದು, ಒಂದಿಷ್ಟು ಬೇಸರವಾಗಿದೆ ಎಂದಿದ್ದಾರೆ. ಕರೋನಾದಿಂದಾಗಿ ಅವರ ಅಂತಿಮ ದರ್ಶನ ಪಡೆಯಲು ಆಗ್ತಿಲ್ಲ. ಜನರಿಗೂ ಅವಕಾಶವಿಲ್ಲ.  ಅವರ ಮುಖ ದರ್ಶನ ಮಾಡಲು ಅವಕಾಶವಿಲ್ಲ ಅನ್ನೋದು ನನಗೆ ತೀವ್ರ ಬೇಸರ ತಂದಿದೆ ಎಂದಿದ್ದಾರೆ. 20ಕ್ಕಿಂತ ಹೆಚ್ಚು ಜನ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ ಅನ್ನೋದು ಬೇಸರದ ಸಂಗತಿ ಎಂದು ಕಿಚ್ಚ ಸುದೀಪ ಟ್ವೀಟ್ ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!