ಶುರುವಾಗಿದೆ ಕ್ಷೇತ್ರ ಗೆಲುವಿಗೆ ಪಾಲಿ‘ಟ್ರಿಕ್ಸ್’

335

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯ ದಿನವಾಗಿತ್ತು. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಇಂದಿನಿಂದ ಬಿರುಸಿನ ಪ್ರಚಾರ ಶುರು ಮಾಡಿದ್ದಾರೆ.

ಬೆಳಗಾವಿಯ ಗೋಕಾಕ, ಕಾಗವಾಡ, ಅಥಣಿ, ಹಾವೇರಿಯ ಹಿರೇಕೆರೂರ, ಚಿಕ್ಕಬಳ್ಳಾಪುರ, ಹೊಸಕೋಟೆ, ಬಳ್ಳಾರಿಯ ವಿಜಯನಗರ, ಮೈಸೂರಿನ ಹುಣಸೂರು, ಯಲ್ಲಾಪುರ, ಬೆಂಗಳೂರಿನ ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ರಾಜರಾಜೇಶ್ವರಿ ನಗರ, ಕೆ.ಆರ್ ಪುರಂ, ಕೆ.ಆರ್ ಪೇಟೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಅನರ್ಹರರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತುಕೊಂಡಿದೆ. ಸ್ವಪಕ್ಷಕ್ಕೆ ಮೋಸ ಮಾಡಿ ಹೋದವರ ವಿರುದ್ಧವಾಗಿ ಕಾಂಗ್ರೆಸ್ ಪ್ಲಾನ್ ಮಾಡ್ತಿದೆ. ಮೈತ್ರಿ ಸರ್ಕಾರ ವೇಳೆ ಕಿರುಕುಳ ಕೊಟ್ಟ ಕಾಂಗ್ರೆಸ್ ವಿರುದ್ಧ ತೆನೆಹೊತ್ತ ಮಹಿಳೆ ಪೈಪೋಟಿ ನೀಡ್ತಿದ್ದಾಳೆ. ಹೀಗಾಗಿ ಸಿಎಂ ಬಿಎಸ್ವೈ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಹೆಚ್.ಡಿ ಕುಮಾರಸ್ವಾಮಿ ಸೇರಿ ಘಟಾನುಘಟಿ ನಾಯಕರಿಗೆ ಪ್ರತಷ್ಠೆಯ ಪ್ರಶ್ನೆಯಾಗಿದೆ. ಹೇಗಾದ್ರೂ ಮಾಡಿ 15 ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕು ಅಂತಿದ್ದಾರೆ. ಇದಕ್ಕಾಗಿ ಎಲ್ಲ ರೀತಿಯ ರಣತಂತ್ರ ಹೆಣಿಯುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!