ಕ್ಯಾನ್ಸರ್ ರೋಗಿಗಳಿಗಾಗಿ ತಲೆ ಕೂದಲು ಕತ್ತರಿಸಿಕೊಂಡ ವಿದ್ಯಾರ್ಥಿನಿ

234

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಹೇರ್ ಬ್ಯಾಂಕ್ ಗೆ 6ನೇ ತರಗತಿ ವಿದ್ಯಾರ್ಥಿನಿ ತನ್ನ ತಲೆ ಕೂದಲು ನೀಡಿದ್ದಾಳೆ. ಯೆಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ-2ರಲ್ಲಿ 6ನೇ ತರಗತಿ ಓದುವ ವಿದ್ಯಾರ್ಥಿನಿ ತನ್ನ 11ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ತೆಗೆದುಕೊಂಡು ನಿರ್ಧಾರವನ್ನು ಇದೀಗ ಪೂರೈಸಿದ್ದಾಳೆ.

ಜನವರಿ 14 ದಿಲ್ನಾ ರಾಜೇಶ್ ಅನ್ನೋ ವಿದ್ಯಾರ್ಥಿನಿಯ ಹುಟ್ಟು ಹಬ್ಬ. ಅಂದು ಕ್ಯಾನ್ಸರ್ ರೋಗಿಗಳ ಸಲುವಾಗಿ ತಲೆ ಕೂದಲು ಕೊಡಲು ನಿರ್ಧರಿಸಿದ್ದಳು. ಆದರೆ, ಕೋವಿಡ್ ಲಾಕ್ ಡೌನ್ ನಿಂದಾಗಿ ಸಾಧ್ಯವಾಗಿರ್ಲಿಲ್ಲ. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಬೇಜೈ ಹೊಸ ರಸ್ತೆಯಲ್ಲಿರುವ ಯಚುವಿನ್ ಹೇರ್ ಗ್ಯಾರೇಜ್ ನಲ್ಲಿ ಕೊದಲನ್ನು ನೀಡಿದ್ದಾರೆ.

ಮಿರಾಕಲ್ ಚಾರಿಟಬಲ್ ಅಸೋಸಿಯೇಶನ್ ಆಫ್ ಕೇರಳನ ಹೇರ್ ಬ್ಯಾಂಕ್ ಗೆ ಕೂದಲುನ್ನು ನೀಡಲಾಗಿದೆ. ದಿಲ್ನಾ, ಪತ್ರಕರ್ತ ರಾಜೇಶ್ ಹಾಗೂ ಉಪನ್ಯಾಸಕಿ ಕೆ.ಎಂ ಜಮುನಾ ಅವರ ಪುತ್ರಿಯಾಗಿದ್ದಾಳೆ.




Leave a Reply

Your email address will not be published. Required fields are marked *

error: Content is protected !!