ದೇಶದಲ್ಲಿ ಈ ವರ್ಷ 13.9 ಲಕ್ಷ ಕ್ಯನ್ಸರ್ ಪ್ರಕರಣ

304

ಪ್ರಜಾಸ್ತ್ರ ವಿಶೇಷ

ನವದೆಹಲಿ: ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗ್ತಿದೆ. ಈ ವರ್ಷ ದೇಶದಲ್ಲಿ ಬರೋಬ್ಬರಿ 13.9 ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿರಬಹುದು ಎಂದು ಅಂದಾಜಿಸಲಾಗಿದೆ. ತಂಬಾಕು ಉತ್ಪನಗಳ ಸೇವನೆಯಿಂದ 3.7 ಲಕ್ಷ ಪ್ರಕರಣಗಳಿವೆ. 2025ರ ವೇಳೆಗೆ ಇದು 15.7 ಲಕ್ಷಕ್ಕೆ ಏರಿಕೆಯಾಗುತ್ತೆ ಅನ್ನೋ ಆಘಾತಕಾರಿ ವರದಿ ಹೊರ ಬಿದ್ದಿದೆ.

ಗಂಟಲು ಕ್ಯಾನ್ಸರ್

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ನ್ಯಾಷನಲ್ ಸೆಂಟರ್ ಫಾರ್ ಡೀಸಿಸ್ ಇನ್ ಫಮ್ರ್ಯಾಟಿಕ್ಸ್ ಆ್ಯಂಡ್ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಂಡಿದೆ. 7,12,758 ಮಹಿಳೆಯರು ಹಾಗೂ 6,79,471 ಪುರುಷರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂದು ಅಂದಾಜು ಮಾಡಲಾಗಿದೆ.

ಬಾಯಿ ಕ್ಯಾನ್ಸರ್

2025ರಲ್ಲಿ ಸ್ತನ ಕ್ಯಾನ್ಸರ್ ರೋಗಿಗಳ ಸಂಖ್ಯೆ 2,38,908ಕ್ಕೆ ಏರಿಕೆಯಾಗಲಿದೆಯಂತೆ. ಶ್ವಾಸಕೋಶ ಕ್ಯಾನರ್(1,11,328), ಬಾಯಿ ಕ್ಯಾನ್ಸರ್ (90,060) ಎಂದು ಅಂದಾಜು ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!