ನಂಬರ್ ಪ್ಲೇಟ್ ಮೇಲೆ ಸಂಘ, ಸಂಸ್ಥೆ, ಹುದ್ದೆಯ ಹೆಸರು: ಹೈಕೋರ್ಟ್ ವಾರ್ನಿಂಗ್

426

ಬೆಂಗಳೂರು: ಗ್ರಾಮ ಪಂಚಾಯ್ತಿ ಸದಸ್ಯನಿಂದ ಹಿಡಿದು ಲೋಕಸಭಾ ಸದಸ್ಯರವರೆಗೂ ಕಾರ್, ಬೈಕ್ ಮೇಲೆ ಹೆಸರು, ಹುದ್ದೆ, ಸಂಘ ಸಂಸ್ಥೆಗಳ ಹೆಸರು ಬರೆಸಿಕೊಂಡು ಓಡಾಡುವುದು ಕಾಮನ್ ಆಗದೆ. ಇದಕ್ಕೆ ಹೈಕೋರ್ಟ್ ಚಾಟಿ ಬೀಸಿದ್ದು, ಇನ್ಮುಂದೆ ಯಾರಾದ್ರೂ ಈ ರೀತಿ ನಂಬರ್ ಪ್ಲೇಟ್ ಮೇಲೆ ಬರೆಸಿಕೊಂಡಿದ್ದು ಕಂಡು ಬಂದ್ರೆ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ.

ಹೈಕೋರ್ಟ್ ನ್ಯಾಯಮೂರ್ತಿ ಆರ್.ದೇವದಾಸ್ ಏಕಸದಸ್ಯಪೀಠ ಈ ಬಗ್ಗೆ ಖಡಕ್ ಸೂಚನೆ ನೀಡಿದೆ. ಸರ್ಕಾರೇತರ ಸಂಘ ಸಂಸ್ಥೆಗಳು, ಸಂಘಟನೆಗಳು ಸೇರಿದಂತೆ ಹಾಲಿ, ಮಾಜಿ ಶಾಸಕರು, ಸಚಿವರು ಸೇರಿದಂತೆ ಯಾರೊಬ್ಬರೂ ತಮ್ಮ ಖಾಸಗಿ ವಾಹನಗಳ ಮೇಲೆ ಚಿಹ್ನೆ, ಲಾಂಛನ, ಹುದ್ದೆಯ ಹೆಸರು ಹಾಕಿಕೊಳ್ಳಬಾರದು. ಒಂದು ವೇಳೆ ಅಳವಡಿಸದ್ರೆ ಅಂತವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಈ ಬಗ್ಗೆ ಹೆಚ್ಚುವರಿ ಅಡ್ವಕೇಟ್ ಜನರಲ್ ಪ್ರಸನ್ನ ದೇಶಪಾಂಡೆ ಅವರಿಗೆ ಫೆಬ್ರವರಿ 22ರ ಒಳಗೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.

ಯಾವುದ್ಯಾವುದೋ ಸಂಘಟನೆ ಹೆಸರಲ್ಲಿ, ಹುದ್ದೆಯ ಹೆಸರಲ್ಲಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ, ಎಫ್ ಡಿಎ, ಎಸ್ ಡಿಎ ಹುದ್ದೆಯಲ್ಲಿರುವವರು ಸಹ ವಾಹನಗಳ ಮೇಲೆ ಬೇಕಾಬಿಟ್ಟಿಯಾಗಿ ನಾಮಫಲಕ ಅಳವಡಿಸ್ತಿರುವ ಬಗ್ಗೆ ಸಾಕಷ್ಟು ದೂರುಗಳು ಈ ಹಿಂದೆ ಕೇಳಿ ಬಂದಿದ್ವು. ಇನ್ಮುಂದೆ ಹೀಗೆ ಬೇಕಾಬಿಟ್ಟಿಯಾಗಿ ಬರೆದುಕೊಂಡು ಓಡಾಡುವುದಕ್ಕೆ ಕಡಿವಾಣ ಬೀಳಲಿದೆ.




Leave a Reply

Your email address will not be published. Required fields are marked *

error: Content is protected !!