ಕ್ಯಾಸಿನೋ ವಿಚಾರ: ಹೆಚ್ಡಿಕೆ ಹೆಸರು ಪ್ರಸ್ತಾಪಿಸಿದ ಜಮೀರ

334

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ ಅಹ್ಮದ ಖಾನ್ ಹಾಗೂ ನಟಿ ಸಂಜನಾ ಗರ್ಲಾನಿ ಶ್ರೀಲಂಕಾದ ಕ್ಯಾಸಿನೋದಲ್ಲಿ ಇದ್ದರು ಎಂದು ಆರೋಪಿಸಲಾಗಿದೆ. ಪ್ರಶಾಂತ ಸಂಬರಗಿ ಆರೋಪಕ್ಕೆ ಇಷ್ಟು ದಿನ ಸುಳ್ಳು ಎನ್ನುತ್ತಿದ್ದ ಸಂಬರಗಿ ಇದೀಗ ಒಪ್ಪಿಕೊಂಡಿದ್ದಾರೆ.

ಕ್ಯಾಸಿನೋಗೆ ನಾನೊಬ್ಬನೆ ಹೋಗಿಲ್ಲ. ಜೆಡಿಎಸ್ ನಲ್ಲಿದ್ದಾಗ ಹೆಚ್.ಡಿ ಕುಮಾರಸ್ವಾಮಿ ಸಹ ನಮ್ಮ ಜೊತೆ ನಮ್ಮ ಬಂದಿದ್ರು. ಹಚ್ಡಿಕೆ ಸೇರಿ 26 ಮಂದಿ ಶಾಸಕರು ಒಟ್ಟಿಗೆ ಹೋಗಿದ್ವಿ. ಅದು ಕಾನೂನು ಬಾಹಿರವಲ್ಲ. ಆದ್ರೆ, ನಾನು ಸಂಜನಾ ಜೊತೆ ಹೋಗಿಲ್ಲ. ಡ್ರಗ್ಸ್ ವಿಚಾರಕ್ಕೂ ನನ್ಗೂ ಸಂಬಂಧವಿಲ್ಲ. ಒಂದು ವೇಳೆ ಸಾಬೀತಾದ್ರೆ ಗಲ್ಲು ಶಿಕ್ಷೆ ಕೊಡಿ ಎಂದು ಶಾಸಕ ಜಮೀರ ಅಹ್ಮದ ಖಾನ್ ಹೇಳಿದ್ದಾರೆ.

ಇನ್ನು ಸಂಜನಾ ಜೊತೆ ಹೋಗಿರುವುದು ಸಾಬೀತಾದ್ರೆ ತಮ್ಮ ಆಸ್ತಿ ಬರೆದು ಕೊಡುವುದಾಗಿ ಹೇಳಿದ್ದಾರೆ. ಅದು ತೀವ್ರ ಚರ್ಚೆಯಾಗ್ತಿದ್ದು, ಬಿಜೆಪಿ ನಾಯಕರು ಸಂಜನಾ ಜೊತೆ ಹೋಗಿದ್ದು ಸತ್ಯವಾದ್ರೆ ಆಸ್ತಿ ಬರೆದು ಕೊಡುವಿರಾ ಎಂದು ಕೇಳ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!