ಸೂಲಿಬೆಲೆ-ಡಾಲಿ ಬೆಂಬಲಿಗರ ‘ಸೋಷಿಯಲ್ ವಾರ್’

394

ಕರೋನಾ ವೈರಸ್ ವಿಚಾರಕ್ಕೆ ಸಂಬಂಧಿಸಿದಂತೆ ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ ಅವರು ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ನಟ ಡಾಲಿ ಧನಂಜಯ ಮಾಡಿರುವ ಟ್ವೀಟ್ ಚರ್ಚೆ ಜೋರಾಗಿ ನಡೆಯುತ್ತಿದೆ. ಇವರಿಬ್ಬರ ಪರವಾಗಿ ಇರುವವರು ಸೋಷಿಯಲ್ ಮೀಡಿಯಾದಲ್ಲಿ ಟಾಕ್ ಫೈಟ್ ನಡೆಸಿದ್ದಾರೆ.

ಇಟಲಿಯಲ್ಲಿ ಸುಮಾರು 80 ಜನ ಕರೋನಾ ಸೋಂಕಿತರನ್ನ ನಿಗಾ ಘಟಕದಲ್ಲಿ ಇರಿಸಿಲ್ಲ ಅನ್ನೋದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ಟ್ವೀಟ್ ಮಾಡಿರುವ ಸೂಲಿಬೆಲೆ ಅವರು, ಜಿಸಸ್ ಲವ್ಸ್ ಆಲ್ ಎಂದಿದ್ದಾರೆ. ಇದಕ್ಕೆ ನಟ ಧನಂಜಯ ಏನಾದರು ಆಗು ಮೊದಲು ಮಾನವನಾಗು ಎಂದು ಟ್ವೀಟ್ ಮಾಡಿದ್ದಾರೆ. ಈ ವಿಚಾರ ಭರ್ಜರಿಯಾಗಿ ಚರ್ಚೆಯಾಗ್ತಿದೆ.

ಸೂಲಿಬೆಲೆ ಬೆಂಬಲಿಗರು ನಟ ಧನಂಜಯ ಬಗ್ಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ. ಇತ್ತ ಧನಂಜಯ ಮಾತನ್ನ ಒಪ್ಪಿಕೊಳ್ಳುವ ಜನರು, ಅವರನ್ನ ಬೆಂಬಲಿಸಿ ಸೂಲಿಬೆಲೆ ವಿರುದ್ಧ ಹಾಗೂ ಅವರನ್ನ ಸಮರ್ಥಿಸಿಕೊಳ್ಳುವವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಮಾತ್ರ ಕರೋನಾ ವೈರಸ್ ರೀತಿಯಲ್ಲಿ ಎಲ್ಲೆಡೆ ಹರಿದಾಡ್ತಿದೆ.




Leave a Reply

Your email address will not be published. Required fields are marked *

error: Content is protected !!