ಮಾಜಿ ಸಿಎಂ ನಾಯ್ಡು ಸೇರಿ ಹಲವರ ಗೃಹ ಬಂಧನ

391

ವಿಜಯವಾಡ: ಆಂಧ್ರಪ್ರದೇಶ ಸರ್ಕಾರದ ವಿರುದ್ಧ ನಡೆಸಲಾಗ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ತಡೆಯಲು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಟಿಡಿಪಿಯ ಹಲವು ನಾಯಕರನ್ನ ಗೃಹಬಂಧನದಲ್ಲಿ ಇಡಲಾಗಿದೆ.

ವಿಜಯವಾಡದ ಉಂಡವಳ್ಳಿಯಲ್ಲಿರುವ ಪೊಲೀಸ್ರು ನಾಯ್ಡು ಅವರ ಮನೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಪ್ರತಿಭಟನೆಗೆ ಸಜ್ಜಾಗಲು ನಾಯ್ಡು ಮನೆ ಎದುರು ಸೇರಿದ್ದ ಟಿಡಿಪಿ ಕಾರ್ಯಕರ್ತರು ಮತ್ತು ಪೊಲೀಸ್ರ ನಡುವೆ ಮಾತಿನ ಚಕಮಕಿ ನಡೆದಿದೆ. ಇದ್ರಿಂದಾಗಿ ಆಂಧ್ರದಲ್ಲಿ ಇದೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಪೊಲೀಸ್ರೊಂದಿಗೆ ಟಿಡಿಪಿ ನಾಯಕರ ಮಾತುಕತೆ

100 ದಿನ ಪೂರೈಸಿರುವ ಸಿಎಂ ಜಗನಮೋಹನ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ 8 ಟಿಡಿಪಿ ಕಾರ್ಯಕರ್ತರ ಹತ್ಯೆಯಾಗಿದೆ. ಹಲವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ಟಿಡಿಪಿ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು, ಟಿಡಿಪಿ ನಾಯಕಾರದ ಕೆಸಿನೇನಿ ನಾನಿ, ಭೂಮಾ ಅಖಿಲಪ್ರಿಯಾ, ದೇವಿನೇನಿ ಅವಿನಾಶ ಸೇರಿ ಹಲವರನ್ನ ಗೃಹ ಬಂಧನದಲ್ಲಿ ಇರಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!