ಕಲಬುರಗಿಯಲ್ಲಿ ಲವ್-ಸೆಕ್ಸ್-ಮರ್ಡರ್ ಕಹಾನಿ

631

ಕಲಬುರಗಿ: ಪ್ರಿಯಕರನೊಬ್ಬ ಯುವತಿಯನ್ನ ಕೊಲೆ ಮಾಡಿದ ಕೃತ್ಯ ಕಲಬುರಗಿಯಲ್ಲಿ ನಡೆದಿದೆ. ನಗರದ ರಾಜಾಪುರ ನಿವಾಸಿಯಾಗಿರುವ ಯುವಕ, ಕಾಲೇಜೊಂದರ ವಿದ್ಯಾರ್ಥಿಯನ್ನ ಹತ್ಯೆ ಮಾಡಿದ್ದು, ಇದೀಗ ಪೊಲೀಸ್ರ ಅತಿಥಿಯಾಗಿದ್ದಾನೆ.

ಕಾಲೇಜೊಂದರ ಯುವತಿ ಹಾಗೂ ರಾಜಾಪುರದ ಯುವಕ ಒಬ್ಬರನೊಬ್ಬರು ಇಷ್ಟಪಡ್ತಿದ್ರು. ಇದರ ನಡುವೆ ದೈಹಿಕ ಸಂಬಂಧ ಬೆಳೆದು ಯುವತಿ ಗರ್ಭಿಣಿಯಾಗಿದ್ದಾಳೆ. ಇದು ಗೊತ್ತಾಗಿ ಗರ್ಭಪಾತ ಮಾಡಿಸಲು ಸೆಪ್ಟೆಂಬರ್ 4ರಂದು ಬಲವಂತವಾಗಿ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

ಸಾಂದರ್ಭಿಕ ಚಿತ್ರ

ಆಸ್ಪತ್ರೆಯಲ್ಲಿ ಹೈಡೋಸ್ ಇಂಜೆಕ್ಷನ್ ಕೊಡಿಸಿದ್ದಾನೆ. ಇದ್ರಿಂದಾಗಿ ಗರ್ಭಪಾತದ ಟೈಂನಲ್ಲಿ ಯುವತಿ ಸಾವನ್ನಪ್ಪಿದ್ದಾಳೆ. ಬಳಿಕ ಮೃತದೇಹವನ್ನ ಕಾರಿನಲ್ಲಿ ಹಾಕಿಕೊಂಡು 48 ಗಂಟೆಗಳ ಕಾಲ ಸುತ್ತಾಡಿದ್ದಾನೆ. ಮೃತದೇಹ ಡಿಕಂಪೋಸ್ ಆಗಿ ವಾಸನೆ ಬರ್ತಿದ್ದಂತೆ ತೆಲಂಗಾಣದ ಜಹಿರಾಬಾದ್ ಪರಾಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೃತದೇಹವನ್ನ ಸುಟ್ಟಿದ್ದಾನೆ.

ಇತ್ತ ಯುವತಿಯ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿ, ಸೆಪ್ಟೆಂಬರ್ 6ರಂದು ಬ್ರಹ್ಮಪುರ ಠಾಣೆಯಲ್ಲಿ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸ್ರು, ಆರೋಪಿ ಪತ್ತೆ ಹಚ್ಚಿ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಗರ್ಭಪಾತ ಮತ್ತು ಕೊಲೆಗೆ ಸಹಾಯ ಮಾಡಿದ ವೈದ್ಯರ ವಿರುದ್ಧ ಸಹ ಕ್ರಮ ಕೈಗೊಳ್ಳಲು ಪೊಲೀಸ್ರು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!