ಸಿಎಂ ಪರಿಹಾರ ನಿಧಿ.. ನೀವು ಮೊದಲು ಒಂದು ಹೆಜ್ಜೆ ಮುಂದೆಯಿಡಿ…

342

ಪ್ರಜಾಸ್ತ್ರ ವಿಶೇಷ:

ಬೆಂಗಳೂರು: ಕರೋನಾ ವೈರಸ್ ವಿರುದ್ಧ ಇಡೀ ದೇಶ ಹೋರಾಡ್ತಿದೆ. ಏಪ್ರಿಲ್ 14ರ ವರೆಗೆ ಭಾರತ ಲಾಕ್ ಡೌನ್. ಇಂಥಾ ಟೈಂನಲ್ಲಿ ಅಪಾರ ಪ್ರಮಾಣದಲ್ಲಿ ಆರ್ಥಿಕ ಕುಸಿತ ಕಂಡಿದೆ. ಇದ್ರಿಂದಾಗಿ ಜನ ಸಾಮಾನ್ಯರ ಬದುಕು ಕತ್ತಿಯಂಚಿನ ಮೇಲಿನ ನಡಿಗೆಯಾಗಿದೆ. ಮನೆಯಲ್ಲಿರಲು ಆಗ್ತಿಲ್ಲ. ಹೊರಗೆ ಬರಲು ಆಗ್ತಿಲ್ಲ. ಹೀಗಾಗಿ ಮುಂದಿನ 20 ದಿನಗಳ ಕಾಲ ಏನು ಅನ್ನೋ ಚಿಂತೆಯಲ್ಲಿದ್ದಾರೆ.

ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರು, ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವ ಮೂಲಕ ದೇಣಿಗೆ ನೀಡುವವರು ನೀಡಬಹುದು ಎಂದಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಧಾನಿಗಳು ಹಣಕಾಸಿನ ನೆರವು ನೀಡಬೇಕೆಂದು ಕೇಳಿಕೊಂಡಿದ್ದಾರೆ. ಇದು ಅನಿವಾರ್ಯ ಸಹವಾಗಿದೆ. ಆದ್ರೆ, ಜನ ಸಾಮಾನ್ಯರ ಬುದುಕು ಹೈರಾಣಾಗಿರುವ ಹೊತ್ತಿನಲ್ಲಿ ಆರ್ಥಿಕ ಶಕ್ತಿ ಎಷ್ಟಿದೆ ಅನ್ನೋ ಪ್ರಶ್ನೆ ಮೂಡಿದೆ. ಆದಾಯದ ಮೂಲವೇ ನಿಂತು ಹೋಗಿರುವ ಸಾಮಾನ್ಯ ಜನರು ಹೇಗೆ ಸಹಾಯ ಮಾಡಲು ಸಾಧ್ಯ. ಪ್ರವಾಹದ ಸಂದರ್ಭದಲ್ಲಿ ಇಡೀ ನಾಡಿನ ಜನತೆ ಸರ್ಕಾರದ ಬೆನ್ನಿಗೆ ನಿಂತಿದೆ. ಆದ್ರೆ, ಈಗ ಪರಿಸ್ಥಿತಿ ಬೇರೆಯಿದೆ. ಇಂಥಾ ಹೊತ್ತಿನಲ್ಲಿ ಉಳ್ಳವರಲ್ಲಿ ಎಷ್ಟು ಮಂದಿ ಕೊಡ್ತಾರೆ ಅನ್ನೋ ಅನುಮಾನ ಸಹ ಇದೆ. ಹೀಗಾಗಿ ಸಾರ್ವಜನಿಕರು ರಾಜಕಾರಣಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹಾಲಿ ಹಾಗೂ ಮಾಜಿ ಸಚಿವರು, ಶಾಸಕರು, ಸಂಸದರು, ಮಹಾನಗರ ಪಾಲಿಕೆ ಸದಸ್ಯರು, ಅಧ್ಯಕ್ಷರು, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ನಗರಸಭೆ, ಪುರಸಭೆ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು ಆದಿಯಾಗಿ ಯಾರೆಲ್ಲ ಸಮಾಜ ಸೇವಕರು ಇದ್ದಾರೋ ಅವರು ಈ ವಿಚಾರದಲ್ಲಿ ಮೊದಲು ಒಂದು ಹೆಜ್ಜೆ ಮುಂದೆ ಇಡಿ. ಮೊದಲು ನೀವು ಪ್ರಾಮಾಣಿಕವಾಗಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿ. ಆಗ ಉಳಿದ ಆರ್ಥಿಕ ಸ್ಥಿತಿವಂತರು ಸಹಾಯ ಮಾಡಲು ಮುಂದೆ ಬರ್ತಾರೆ ಅನ್ನೋ ಸಲಹೆ ನೀಡಿದ್ದಾರೆ. ನಾಯಕನಾದವನು ಇಂಥಾ ವಿಚಾರದಲ್ಲಿ ಮುಂದೆ ಬಂದಾಗ ಮಾತ್ರ ಅವರ ಹಿಂಬಾಲಕರು ಜೊತೆಯಾಗ್ತಾರೆ.

ಇದು ಆಕ್ರೋಶದ, ಹತಾಶೆಯ ನುಡಿಗಳಲ್ಲ. ಚುನಾವಣೆ ಟೈಂನಲ್ಲಿ ಜನನಾಯಕರು ಏನೆಲ್ಲ ಮಾಡ್ತಾರೆ ಅನ್ನೋದು ಬಿಚ್ಚಿಟ್ಟ ರಹಸ್ಯ. ಆದ್ರಿಂದ ತಂತಮ್ಮ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ ಏನು ಸಹಾಯ ಮಾಡಲು ಆಗುತ್ತೋ ಅಷ್ಟೊಂದು ಆರ್ಥಿಕ ಸಹಾಯ ಮಾಡಿದ್ರೆ, ಖಾಲಿಯಾಗಿರುವ ರಾಜ್ಯ ಸರ್ಕಾರದ ಖಜಾನೆಯಲ್ಲಿ ಒಂದಿಷ್ಟು ಹಣ ಸಂಗ್ರಹಗೊಳ್ಳಬಹುದು. ಹೀಗಾಗಿ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರಾಜಕೀಯ ಮುಖಂಡರು ಈ ಬಗ್ಗೆ ಯೋಚಿಸಬೇಕಿದೆ. ನಿಮ್ಗೆ ವೋಟ್ ನೀಡಿದ ಜನ ಇಂಥಾ ಸಂದರ್ಭದಲ್ಲಿ ಈ ರೀತಿ ಬಯಸುವುದು ತಪ್ಪಲ್ಲವಲ್ಲ. ಸಹಾಯ ಮಾಡಬೇಕು ಅನ್ನೋದು ರಾಜಕಾರಣಿಗಳನ್ನ ಹೊರತು ಪಡಿಸಿಲ್ಲ…




Leave a Reply

Your email address will not be published. Required fields are marked *

error: Content is protected !!