ಉದ್ಯಾನವನದಲ್ಲಿ ಮಗುವಿಗೆ ಜನ್ಮ.. ಮಾನವೀಯತೆ ತೋರಿದ ಶಿಕ್ಷಕಿ

253

ಪ್ರಜಾಸ್ತ್ರ ಸುದ್ದಿ

ಮೈಸೂರು: ತುಂಬು ಗರ್ಭಣಿಯೊಬ್ಬರು ಪಾರ್ಕ್ ಗೆ ಬಂದಿದ್ದ ವೇಳೆ ಹೆರಿಗೆನೋವು ಕಾಣಿಸಿಕೊಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವೇಳೆ ದೈಹಿಕ ಶಿಕ್ಷಕಿಯೊಬ್ಬರು ಅವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.

ಕೊಡಗು ಮೂಲದ ಮಹಿಳೆಯೊಬ್ಬರು ಬಸ್ ನಿಲ್ದಾಣದ ಹತ್ತಿರದ ಪೀಪಲ್ಸ್ ಪಾರ್ಕ್ ಗೆ ಇಬ್ಬರು ಮಕ್ಕಳೊಂದಿಗೆ ಬಂದಿದ್ದಾರೆ. ಈ ವೇಳೆ ಹೆರಿಗೆನೋವು ಕಾಣಿಸಿಕೊಂಡಿದೆ. ಆಗ ಅಲ್ಲಿಯೇ ಇದ್ದ ಶಿಕ್ಷಕಿ ಶೋಭಾ ಎಂಬುವರು ಹೆರಿಗೆ ಮಾಡಿಸಿ, ಮಗುವನ್ನ ಶುಚಿಗೊಳಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಸಹ ಸಹಾಯ ಮಾಡಿ ತಾಯಿ, ಮಗು ಉಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!