ಚಿರು, ಸುಶಾಂತಗೆ ಗೂಗಲ್ ಇಂಡಿಯಾ ನಮನ

336

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಸ್ಟಾರ್ ನಟ ಚಿರಂಜೀವಿ ಸರ್ಜಾ ಜೂನ್ 7ರಂದು ಹೃದಯಾಘಾತದಿಂದ ನಿಧನ ಹೊಂದಿದ್ರು. ಕೇವಲ 35 ವರ್ಷದ ಚಿರು ನಿಧನಕ್ಕೆ ಚಂದನವನ ಸೇರಿದಂತೆ ಇಡೀ ರಾಜ್ಯದ ಜನತೆ ಕಂಬನಿ ಮಿಡಿಯಿತು. ಸೌಥ್ ಸಿನಿ ದುನಿಯಾದ ಮಂದಿ ಸಹ ಸಂತಾಪ ಸೂಚಿಸಿದ್ರು.

ಇನ್ನು ಜೂನ್ 14 ರಂದು ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್, ಆತ್ಮಹತ್ಯೆ ಮಾಡಿಕೊಂಡ. ಕೇವಲ 34 ವರ್ಷದ ಸುಶಾಂತ ಸೂಸೈಡ್ ಗೆ ಎಲ್ಲೆಡೆ ಸಂತಾಪ ಸೂಚಿಸಲಾಯ್ತು. ಯಾವ ಕಾರಣಕ್ಕೆ ರೈಸಿಂಗ್ ಸ್ಟಾರ್ ಸೂಸೈಡ್ ಮಾಡಿಕೊಂಡ ಅನ್ನೋ ಪ್ರಶ್ನೆ ಮೂಡಿದೆ.

https://twitter.com/GoogleIndia/status/1272451680324313088?s=20

ಈ ಇಬ್ಬರು ಯುವ ನಟರಿಗೆ ಗೂಗಲ್ ಇಂಡಿಯಾ ಗೌರವ ಸಲ್ಲಿಸಿದೆ. ಕೆಳೆದ ಕೆಲ ದಿನಗಳಿಂದ ನಾವು ಕಷ್ಟದ ದಿನಗಳನ್ನ ಎದುರಿಸ್ತಿದ್ದೇವೆ. ಇಬ್ಬರು ಪ್ರತಿಭಾವಂತರನ್ನ ಕಳೆದುಕೊಂಡಿದ್ದೇವೆ. ಅವರಿಗೆ ನಾವು ಗೌರವ ಸಲ್ಲಿಸ್ತಿದ್ದೇವೆ. ನಮ್ಮೊಂದಿಗೆ ಸದಾ ಇರುತ್ತಾರೆ ಎಂದು ಹೇಳುವ ಮೂಲಕ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ.




Leave a Reply

Your email address will not be published. Required fields are marked *

error: Content is protected !!