ಕೋಟುಮಚಗಿ ಗ್ರಾಮದಲ್ಲಿ ಕರೋನಾ ಸೋಂಕು ದೃಢ

425

ಪ್ರಜಾಸ್ತ್ರ ಸುದ್ದಿ

ಗದಗ: ಜಿಲ್ಲೆಯ ನರೇಗಲ್ಲ ತಾಲೂಕಿನ ಕೋಟುಮಚಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಬ್ಬರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಸೋಂಕು ಬಂದ ವ್ಯಕ್ತಿಯನ್ನ ಆಂಬ್ಯುಲೆನ್ಸ್ ಮೂಲಕ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋವಿಡ್ 19 ಬಂದಿರುವುದ್ರಿಂದ, ಗ್ರಾಮದಲ್ಲಿ ನಾಳೆಯಿಂದ ಬದು ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎಂದು ಗ್ರಾಮ ಪಂಚಾಯ್ತಿಯಿಂದ ತಿಳಿಸಲಾಗಿದೆ. ಇದಕ್ಕೆ ಸಂಬಂಧಪಟ್ಟವರು ಎಲ್ಲ ಕೂಲಿಕಾರರಿಗೆ ತಿಳಿಸಬೇಕು. ಇನ್ನು ಗ್ರಾಮಸ್ಥರು ಮಾಸ್ಕ್ ಧರಿಸಿ ಓಡಾಡಬೇಕು. ವೃದ್ಧರು, ಮಕ್ಕಳು ಮನೆಯಿಂದ ಹೊರಗಡೆ ಬರಬಾರದು ಎಂದು ಮನವಿ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!