ಬಬಲೇಶ್ವರದಲ್ಲಿ ಚಿರತೆ ಸೆರೆ

346

ಪ್ರಜಾಸ್ತ್ರ ಸುದ್ದಿ

ಬಬಲೇಶ್ವರ: ವಿಜಯಪುರ ಜಿಲ್ಲೆಯ ತಾಲೂಕಿನ ಹತ್ತಿರ ಕಾಣಿಸಿಕೊಂಡು ಜನರಲ್ಲಿ ಭಯ ಭೀತಿ ಮೂಡಿಸಿದ್ದ ಚಿರತೆ ಸೆರೆ ಹಿಡಿಯಲಾಗಿದೆ. ಲಾಕ್‌ ಡೌನ್ ವೇಳೆ ಕೃಷ್ಣಾ ನದಿ ದಾಟಿ ಬಂದಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬಲೆಗೆ ಬಿದ್ದು ಸೆರೆಯಾಗಿದೆ.

ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ ಹೊರ ವಲಯದಲ್ಲಿಟ್ಟಿದ್ದ ಬಲೆಗೆ ಚಿರತೆ ಬಿದ್ದಿದೆ. ರಾತ್ರಿ ಹೊತ್ತು ಎಮ್ಮೆ, ಮೇಕೆ, ಸಾಕು ಪ್ರಾಣಿಗಳ ಬೇಟೆ ಆಡುವ ಮೂಲಕ, ಬಬಲಾದಿ, ದೇವರಗೆಣ್ಣೂರು, ಗುಣದಾಳ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಹಾವಳಿ ಇಟ್ಟಿತ್ತು. ಅಲ್ದೇ, ಜನರು ಸಹ ಸಾಕಷ್ಟು ಆತಂಕಕ್ಕೆ ಒಳಗಾಗಿದ್ರು.

ಇದೀಗ ಚಿರತೆ ಸೆರೆಯಿಂದ ಬಬಲೇಶ್ವರ ತಾಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಚಿರಾಂಕ ವನ್ಯಜೀವಿ ಪ್ರದೇಶದಿಂದ ಚಿರತೆ ಬಂದಿರಬಹುದು ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!