ಸಿಜಿಐ ಕಚೇರಿ ಆರ್ ಟಿಐ ವ್ಯಾಪ್ತಿಗೆ

350

ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಕಚೇರಿ ಆರ್ ಟಿಐ ವ್ಯಾಪ್ತಿಗೆ ಬರುತ್ತೋ ಬರಲ್ಲವೋ ಅನ್ನೋ ಪ್ರಕರಣದ ತೀರ್ಪನ್ನ ಇಂದು ಪ್ರಕಟಿಸಲಾಗಿದೆ. ಸಿಜಿಐ ಕಚೇರಿ ಸಹ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರುತ್ತೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ ಗೊಗೊಯ್ ನೇತೃತ್ವದ ಪಂಚ ಸದಸ್ಯ ಪೀಠ ಇಂದು ಮಧ್ಯಾಹ್ನ ತೀರ್ಪು ನೀಡಿದ್ದು, ದೆಹಲಿ ಹೈ ಕೋರ್ಟ್ ನೀಡಿದ್ದ ತೀರ್ಪನ್ನ ಎತ್ತಿ ಹಿಡಿದಿದೆ. ಸಿಜಿಐ ಕಚೇರಿ ಸಾರ್ವಜನಿಕರ ಆಸ್ತಿಯಾಗಿದೆ. ನ್ಯಾಯಾಂಗದ ಸ್ವಾತಂತ್ರ್ಯ ಅವರ ಖಾಸಗಿ ಹಕ್ಕು ಅಲ್ಲ. ಅವರ ಮೇಲೆ ಸಂವಿಧಾನ ನೀಡಿರುವ ಮಹತ್ವದ ಜವಾಬ್ದಾರಿ ಎಂದು ದೆಹಲಿ ಹೈ ಕೋರ್ಟ್ ಹೇಳಿತ್ತು.

ದೆಹಲಿ ಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ ರಂಜನ ಗೊಗೊಯ್, ನ್ಯಾ ಎನ್.ವಿ ರಮಣ, ನ್ಯಾ ಡಿ.ವೈ ಚಂದ್ರಚೂಡ, ನ್ಯಾ ದೀಪಕ ಗುಪ್ತಾ ಹಾಗೂ ನ್ಯಾ ಸಂಜೀವ ಖನ್ನ ಅವರ ನೇತೃತ್ವದ ಪಂಚ ಪೀಠ ಸಿಜಿಐ ಕಚೇರಿ ಸಹ ಮಾಹಿತಿ ಹಕ್ಕು ಕಾಯ್ದೆ ಅಡಿ ಬರುತ್ತೆ ಅನ್ನೋ ಮಹತ್ವದ ಆದೇಶ ನೀಡಿದೆ.




Leave a Reply

Your email address will not be published. Required fields are marked *

error: Content is protected !!