ನಾಳೆ ಶಬರಿಮಲೆ ತೀರ್ಪು: ಮತ್ತೊಂದು ಇತಿಹಾಸಕ್ಕೆ ಕಾದ ಜನತೆ

349

ತಿರುವನಂತಪುರಂ: ನಾಳೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿನತ್ತ ಜನತೆ ಮತ್ತೆ ಕುತೂಹಲದಿಂದ ನೋಡ್ತಿದೆ. ಕಾರಣ, ನಾಳೆ ಶಬರಿಮಲೆಗೆ ಮಹಿಳೆಗೆ ಪ್ರವೇಶ ಕುರಿತಂತೆ ತೀರ್ಪು ಬರ್ತಿದೆ. ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿಯ ತೀರ್ಪಾಗಿದೆ. ಈ ಬಗ್ಗೆ ಗುರುವಾರ ಪರಿಶೀಲನಾ ಅರ್ಜಿಗಳ ತೀರ್ಪು ಬರಲಿದೆ.

ಮಂಡಲ ಮಕರವಿಳಕ್ಕುಂ ಋತುಮಾನ ನವೆಂಬರ್ 16ರಿಂದ ಶುರುವಾಗಲಿದೆ. ಇದ್ರಿಂದಾಗಿ ಈ ತೀರ್ಪು ಹೆಚ್ಚಿನ ಮಹತ್ವ ಪಡೆದಿದೆ. ಶಬರಿಮಲೆ ಮೇಲಿನ ಬೆಟ್ಟದ ಅಯ್ಯಪ್ಪಸ್ವಾಮಿ ಆಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಲು ಅನುವು ಮಾಡಿಕೊಡಬೇಕೆಂದು ಎಡಪಕ್ಷದ ಆಡಳಿತ ಅರ್ಜಿ ಸಲ್ಲಿಸಿದೆ.

ಈ ಘಟನೆಯಿಂದಾಗಿ ಎಡಪಕ್ಷಗಳು ಹಾಗೂ ಬಲಪಂಥೀಯ ವರ್ಗಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದೀಗ ಸುಪ್ರೀಂ ಕೋರ್ಟ್ ನೀಡುವ ನಾಳಿನ ತೀರ್ಪಿನ ಹಿನ್ನೆಲೆಯಲ್ಲಿ ಸಾಕಷ್ಟು ಭದ್ರತೆಯನ್ನ ನೀಡಲಾಗಿದೆ. ಇನ್ನು ಮಹಿಳಾ ಪೊಲೀಸರನ್ನ ಸಹ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!