ನ್ಯಾಯಾಧೀಶರು ಸರ್ವಜ್ಞರಲ್ಲ ಎಂದ ಸಿ.ಟಿ ರವಿ ವಿರುದ್ಧ ದೂರು

225

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ ಲಸಿಕೆ ವಿಚಾರದಲ್ಲಿ ರಾಜ್ಯ ಸರ್ಕಾರವನ್ನ ಹೈಕೋರ್ಟ್ ಗುರುವಾರ ತೀವ್ರ ತರಾಟೆಗೆ ತೆಗೆದುಕೊಂಡಿತು. 6 ಕೋಟಿಗೂ ಹೆಚ್ಚಿರುವ ರಾಜ್ಯದಲ್ಲಿ ಕೇವಲ ಶೇಕಡ 1ರಷ್ಟು ಡೋಸ್ ಕೊಟ್ಟಿಲ್ಲ. ಜನರಿಗೆ ಸತ್ಯ ಹೇಳಿ. ನಿಮ್ಮ ಕೈಯಿಂದ ಆಗಲ್ಲಂದ್ರೆ ಹೇಳಿ. ಅದನ್ನೇ ದಾಖಲು ಮಾಡುತ್ತೇವೆ ಎಂದಿತ್ತು.

ಇದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ನ್ಯಾಯಾಧೀಶರೇನು ಸ್ವರ್ವಜ್ಞರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ರು. ಈ ಸಂಬಂಧ ವಕೀಲ ಜಿ.ಆರ್ ಮೋಹನ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ದೂರು ನೀಡಿದ್ದಾರೆ.

ಇನ್ನು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರು ಸಹ, ಲಸಿಕೆ ಉತ್ಪಾದನೆ ಇಲ್ಲದೆ ನಾವು ನೇಣು ಹಾಕಿಕೊಳ್ಳಬೇಕಾ ಎಂದು ಕೇಳಿದ್ರು. ಈ ಇಬ್ಬರು ನಾಯಕರ ಹೇಳಿಕೆ ವಿರುದ್ಧ ವಿಪಕ್ಷಗಳು ಭರ್ಜರಿ ವಾಗ್ದಾಳಿ ನಡೆಸಿವೆ.


TAG


Leave a Reply

Your email address will not be published. Required fields are marked *

error: Content is protected !!