ಸಿ.ಟಿ ರವಿ ವಿರುದ್ಧ ಭೋವಿ, ವಡ್ಡರ ಸಮಾಜದ ಆಕ್ರೋಶ

178

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿಯವರ ತಾಯಿಯನ್ನು ಅವಾಚ್ಯ ಪದ ಬಳಸಿ ಹಿಯ್ಯಾಳಿಸಿ ಅಪಮಾನ ಮಾಡಿರುವ ಬಿಜೆಪಿಯ ಸಿ.ಟಿ ರವಿ ಕೂಡಲೇ ಇಡೀ ಹೆಣ್ಣು ಕುಲಕ್ಕೆ ಕ್ಷಮೆಯಾಚಿಸಬೇಕು. ಇಲ್ಲದೇ ಹೋದರೆ ಉಗ್ರವಾದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಭೋವಿ ವಡ್ಡರ ಸಮಾಜದ ತಾಲೂಕಾಧ್ಯಕ್ಷ ಪಂಡಿತ ಯಂಪೂರೆ ಏಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳೀಕೆ ನೀಡಿರುವ ಅವರು, ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಟೀಕೆ ಮಾಡುವುದು ಸರ್ವ ಸಾಮಾನ್ಯ. ಆದರೆ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯ ಸಿ.ಟಿ ರವಿ ಅವರ ಬಾಯಿಯಿಂದ ಇಂತಹ ಕೆಟ್ಟ ಪದಗಳನ್ನು ಬಳಸಿರುವುದು ಅವರ ಪಕ್ಷಕ್ಕೆ, ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ವಿಕೃತ ಆಲೋಚನೆಯ ಇವರನ್ನು ಗಡಿಪಾರು ಮಾಡುವುದಕ್ಕಿಂತ ದೇಶದ ಗಡಿಯನ್ನೇ ದಾಟಿಸುವುದು ಉತ್ತಮ ಎಂದಿದ್ದಾರೆ.

ತಾಯಿ ದೇವತೆಯಾಗಬಹುವುದು, ಆದರೆ ದೇವರು ತಾಯಿಯಾಗಲಾರಳು. ಅದಕ್ಕಾಗಿ ತಾಯಿಗಿಂತ ದೊಡ್ಡ ದೇವರಿಲ್ಲ ಎಂಬ ಮಾತನ್ನು ಸಿ.ಟಿ.ರವಿಯವರು ಓದಿದಂತಿಲ್ಲ. ಅವರು ತಾಯಿಯ ಬಗ್ಗೆ ವಿವೇಕ ಬಳಸಿಕೊಳ್ಳಲಿ ಎಂದು ತಾಲೂಕಾ ಉಪಾದ್ಯಕ್ಷ ದಿಲೀಪ ಆಲಕುಂಟೆ, ಕೊಳ್ಳಪ್ಪ ಚಾಕರೆ, ತಿರುಪತಿ ಬಂಡಿವಡ್ಡರ, ದಯಾನಂದ ಗೊಳಸಾರ, ರವಿ ಚಾಕರೆ, ರಘುಪತಿ ಬಂಡಿವಡ್ಡರ, ಭೀಮಾಶಂಕರ ಯಂಪೂರೆ, ರಾಜು ಆಲಕುಂಟೆ, ಲಕ್ಷ್ಮಣ ಆಲಕುಂಟೆ, ಕಾಂತಪ್ಪ ಯಂಪೂರೆ ಸೇರಿದಂತೆ ಅನೇಕರು ಎಚ್ಚರಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!