ಕಚ್ಚತೀವ ದ್ವೀಪ ಶ್ರೀಲಂಕಾಗೆ ಬಿಟ್ಟುಕೊಟ್ಟ ಕಾಂಗ್ರೆಸ್: ಪ್ರಧಾನಿ ಮೋದಿ

72

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧನಿ ಮೋದಿ, ವಿವಾದಿತ ಕಚ್ಚತೀವ ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿದೆ. ಹೀಗಾಗಿ ಕಾಂಗ್ರೆಸ್ ನಂಬಿಕೆಗೆ ಅರ್ಹವಲ್ಲ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.

1974ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಸರ್ಕಾರ ಕಚ್ಚತೀವ ದ್ವೀಪವನ್ನು ಶ್ರೀಲಂಕಾಗೆ ಹಸ್ತಾಂತರಿಸಿತು ಎಂಬುವುದುನ್ನು ಇತ್ತೀಚೆಗೆ ಆರ್ ಟಿಐ ಮೂಲಕ ಬಹಿರಂಗಗೊಂಡಿದೆ. ಇದು ಕಣ್ಣು ತೆರೆಸುವ, ಅಚ್ಚರಿಯ ವರದಿ. ಹೀಗಿರುವಾಗ ಹೇಗೆ ಕಾಂಗ್ರೆಸ್ ನಂಬಲು ಸಾಧ್ಯ? ದೇಶದ ಸಮಗ್ರತೆ, ಏಕತೆ ದುರ್ಬಲಗೊಳಿಸಿರುವುದೇ ಕಾಂಗ್ರೆಸ್ ನ 75 ವರ್ಷಗಳ ಸಾಧನೆ ಎಂದಿದ್ದಾರೆ.

ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಸಿರುವ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಸೆಲ್ವಪೆರುಂತಗೈ, ಚೀನಾ ಗಡಿಯಲ್ಲಿ ಏನಾಗುತ್ತಿದೆ ಎಂದು ಪ್ರಧಾನಿ ಮೊದಲು ಹೇಳಬೇಕು. ಅರುಣಾಚಲ ಪ್ರದೇಶ, ಲಡಾಖ್ ನಲ್ಲಿ ಎಷ್ಟು ಚದರ ಕಿಲೋ ಮೀಟರ್ ಚೀನಾ ವಶಪಡಿಸಿಕೊಂಡಿದೆ ಅಂತಾ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!