28 ವರ್ಷಗಳ ಬಳಿಕ ಅರ್ಜೆಂಟೀನಾಗೆ ಕೋಪಾ ಕಪ್

258

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೋಪಾ ಅಮೆರಿಕ ಕಪ್ ಟೂರ್ನಿಯ ಫೈನಲ್ ಪುಟ್ಬಾಲ್ ಪಂದ್ಯ ಬ್ರೆಜಿಲ್ ಹಾಗೂ ಅರ್ಜೆಂಟೀನಾ ತಂಡಗಳ ನಡುವೆ ನಡೆದಿದೆ. 1-0 ಅಂತರದಿಂದ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಗೆಲುವು ಸಾಧಿಸಿದೆ. ಈ ಮೂಲಕ 28 ವರ್ಷಗಳ ಬಳಿಕ ಅರ್ಜೆಂಟೀನಾ ಕೋಪಾ ಕಪ್ ಜಯಿಸಿದೆ.

ರಿಯೊ ಡಿ ಜನೈರೊದ ಮರಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 22ನೇ ನಿಮಿಷದಲ್ಲಿ ರೊಡ್ರಿಗೋ ಡಿ ಪಾಲ್ ಅವರು ಏಂಜೆಲ್ ಡಿ ಮಾರಿಯಾಗೆ ಲಾಂಗ್ ಪಾಸ್ ನೀದಿದ್ರಿಂದ ಮೊದಲ ಗೋಲು ಬಂದಿತು. ಈ ಒಂದು ಗೋಲೇ ಗೆಲುವಿಗೆ ಮುನ್ನುಡಿ ಬರೆಯಿತು.

28 ವರ್ಷಗಳ ಬಳಿಕ ಕೋಪಾ ಅಮೆರಿಕ ಕಪ್ ಗೆಲ್ಲುವ ಮೂಲಕ ಅರ್ಜೆಂಟೀನಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ವೇಳೆ ತಂಡದ ಆಟಗಾರರು ಸಂತಸದಿಂದ ಕಣ್ಣೀರು ಹಾಕಿದ್ರು.




Leave a Reply

Your email address will not be published. Required fields are marked *

error: Content is protected !!