ಕರೋನಾ ಹಾಟ್ ಸ್ಪಾಟ್ ಪಟ್ಟಿ ರಿಲೀಸ್.. ರಾಜ್ಯದ 8 ಜಿಲ್ಲೆಗಳು ಡೇಂಜರ್

437

ನವದೆಹಲಿ/ಬೆಂಗಳೂರು: ಇಡೀ ವಿಶ್ವವನ್ನ ತಲ್ಲಣಗೊಳಿಸಿರುವ ಕರೋನಾ ವೈರಸ್ ಕುರಿತು ದಿನಕ್ಕೊಂದು ಭಯಾನಕ ವರದಿಗಳು ಹೊರ ಬೀಳುತ್ತಿವೆ. ಇದೀಗ ಕೇಂದ್ರ ಆರೋಗ್ಯ ಇಲಾಖೆ ದೇಶದ ಕರೋನಾ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿ ರಿಲೀಸ್ ಮಾಡಿದೆ.

ದೇಶದಲ್ಲಿ 207 ಜಿಲ್ಲೆಗಳು ಅಪಾಯದಲ್ಲಿವೆ. 170 ಜಿಲ್ಲೆಗಳು ಹಾಟ್ ಸ್ಪಾಟ್ ಆಗಿವೆ. ಮೂರು ಹಂತಗಳಲ್ಲಿ ಈ ಜಿಲ್ಲೆಗಳ ಪಟ್ಟಿ ರಿಲೀಸ್ ಮಾಡಲಾಗಿದೆ. ಹಾಟ್ ಸ್ಪಾಟ್, ನಾನ್ ಹಾಟ್ ಸ್ಪಾಟ್ ಹಾಗೂ ಗ್ರೀನ್ ಝೋನ್ ಎಂದು ವಿಭಾಗಿಸಲಾಗಿದೆ.

ನಂಬರ್ ಪ್ರದೇಶ ಸೋಂಕು ಸಾವು ಗುಣಮುಖ
01 ಜಗತ್ತು 2,027,958 1,29,155 4,94,4561
02 ಭಾರತ 11,438 392 1,343
03 ಕರ್ನಾಟಕ 279 12 80

ಈ 170 ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಕರುನಾಡಿನ 8 ಜಿಲ್ಲೆಗಳು ಇರೋದು ಅತ್ಯಂತ ವಿಷಾದದ ಸಂಗತಿ.

ರಾಜ್ಯದ 8 ಹಾಟ್ ಸ್ಪಾಟ್ ಜಿಲ್ಲೆಗಳು

ಬೆಂಗಳೂರು ನಗರ, ಮೈಸೂರು

ಬೆಳಗಾವಿ, ದಕ್ಷಿಣ ಕನ್ನಡ

ಕಲಬುರಗಿ, ಬೀದರ

ಬಾಗಲಕೋಟೆ, ಧಾರವಾಡ

ಹೀಗೆ ಈ 8 ಜಿಲ್ಲೆಗಳು ಇದೀಗ ಕರೋನಾ ಹಾಟ್ ಸ್ಪಾಟ್ ಜಿಲ್ಲೆಗಳಾಗಿವೆ. ಇಲ್ಲಿ ಕೋವಿಡ್ 19 ಕಂಟ್ರೋಲ್ ಮಾಡುವ ಮೂಲಕ ಹಸಿರುವ ವಲಯಕ್ಕೆ ತರಬೇಕಿದೆ. ಸರ್ಕಾರ, ಅಧಿಕಾರಿಗಳ ಜೊತೆಯಲ್ಲಿ ಸಾರ್ವಜನಿಕರ ಪಾತ್ರ ಸಹ ದೊಡ್ಡದಿದೆ ಅನ್ನೋದು ಮರೆಯಬಾರದು.




Leave a Reply

Your email address will not be published. Required fields are marked *

error: Content is protected !!