ಸಾಮಾಜಿಕ ಅಂತರ ಎಷ್ಟು ವರ್ಷ ಗೊತ್ತಾ? ಶಾಕ್ ಆಗುತ್ತೆ ಹಾವರ್ಡ್ ವಿಜ್ಞಾನಿಗಳ ಉತ್ತರ…

407

ಪ್ರಜಾಸ್ತ್ರ ವಿಶೇಷ ವರದಿ:

ದೊಡ್ಡವರು ಯಾವಾಗ್ಲೂ ಒಂದು ಮಾತು ಹೇಳೋರು, ಮಾಡಿದ ಪಾಪಕ್ಕೆ ನರಕ ಅನ್ನೋದು ಭೂಮಿ ಮೇಲೆ ನೋಡ್ತೀವಿ ಎಂದು. ಇವತ್ತಿನ ಕಾಲಘಟ್ಟದಲ್ಲಿ ಅದು ಸರಿಯೆನಿಸ್ತಿದೆ. ಯಾಕಂದ್ರೆ, ಕಾಲ ಕಾಲಕ್ಕೆ ಕಾಡುವ ಕಾಯಿಲೆ ಬರುವುದಕ್ಕೆ ಕಾರಣ ನಾವುಗಳೆ. ಅದನ್ನ ನಾವೇ ಅನುಭವಿಸಬೇಕು. ಈ ಅನುಭವ ಸರ್ಕಾರ ನೀಡುವ ಡೆಡ್ ಲೈನ್ ಮೇಲೆ ನಿಂತಿಲ್ಲ. ನಮ್ಮ ಬದುಕಿನ ರೀತಿಯಲ್ಲಿ ಅಡಕಿಗಿದೆ.

ಇದನ್ನ ಓದಿದ್ಮೇಲೆ ನಿಮ್ಗೆ ಖಂಡಿತ ಶಾಕ್ ಆಗುತ್ತೆ. ಆದ್ರೂ ಏನೂ ಮಾಡಕ್ಕೆ ಆಗಲ್ಲ. ಪರಿಸ್ಥಿತಿಯನ್ನ ಎದುರಿಸಲೇಬೇಕು. ನಾವು ನೀವು ಅಂದುಕೊಂಡಂಗೆ ಮೇ 3ಕ್ಕೆ ಲಾಕ್ ಡೌನ್ ಮುಗಿಯಬಹುದು. ಮುಗಿಯದೆ ಇರಬಹುದು. ಆದ್ರೆ, ಸಾಮಾಜಿಕ ಅಂತರ ಮುಂದುವರೆಸಲೇಬೇಕು ಅನ್ನೋದು ವರದಿಯೊಂದರಲ್ಲಿ ಎಚ್ಚರಿಕೆ ನೀಡಲಾಗಿದೆ. ಅದು ಬರೋಬ್ಬರಿ 2 ವರ್ಷದ ತನಕವೆಂದು ಹೇಳಲಾಗಿದೆ.

ಜಗತ್ತಿನ ತುಂಬಾ ಮರಣ ಮೃದಂಗ ಭಾರಿಸುವ ಮೂಲಕ, ಭೂಮಂಡಲವನ್ನೇ ಸ್ಮಶಾನ ಮಾಡಲು ಹೊರಟಿರುವ ಕರೋನಾದಿಂದ ಮುಕ್ತಿ ಪಡೆಯಲು 2022ರ ತನಕ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು, ಹಾವರ್ಡ್ ವಿಜ್ಞಾನಿಗಳು ಹೇಳಿದ್ದಾರೆ. ಕೆಲವು ದಿನಗಳವರೆಗೆ ಮಾತ್ರ ಲಾಕ್ ಡೌನ್ ಮಾಡಿದ್ರೆ ಸಾಲದು, ಸಾಮಾಜಿಕ ಅಂತರ ಅನ್ನೋದು 2022ರ ತನಕ ಕಠಿಣ ರೂಪದಲ್ಲಿ ಪಾಲಿಸಾದಗ ಮಾತ್ರ ಕರೋನಾಕ್ಕೆ ಅಂತ್ಯ ಹಾಡಬಹುದಂತೆ.

ಕರೋನಾ ಸಾಂಕ್ರಾಮಿಕ ರೋಗವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದು, ತಾಪಮಾನ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಟೈಂನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುತ್ತೆ ಎಂದಿದ್ದಾರೆ. ಒಂದು ವೇಳೆ ಇದು ಸಾಂಕ್ರಾಮಿಕ ರೋಗವಾಗಿ ಬದಲಾದ್ರೆ ಖಂಡಿತ ಸಾವುಗಳು ಅನ್ನೋದು ಕ್ಷಣ ಕ್ಷಣಕ್ಕೂ ಏರುತ್ತಲೇ ಹೋಗುತ್ತೆ. ಆದ್ರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದರ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಕೊಂಡಲ್ಲಿ ಈ ವೈರಸ್ ನ್ನ ನಿಯಂತ್ರಿಸಬಹುದು ಎಂದು ಹಾರ್ವಡ್ ವಿಜ್ಞಾನಿ ಡಾ.ಮಾರ್ಕ್ ಲಿಪ್ಸಿಚ್ ಹೇಳಿದ್ದಾರೆ.

ಕರೋನಾ ನಿಯಂತ್ರಣಕ್ಕೆ ಲಸಿಕೆಯೇ ಅಸ್ತ್ರವಾಗಿದೆ. ಇದನ್ನ ತಯಾರಿಸಲು ಇನ್ನು ಹೆಚ್ಚಿನ ಸಮಯಬೇಕಾಗಿದೆ. ಇದರ ಜೊತೆಗೆ ಸೋಂಕಿನಿಂದ ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆಯಾ ಅನ್ನೋದರ ಕುರಿತು ಸಹ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. ಸೋ, ಸಾಮಾಜಿಕ ಅಂತರ ಅನ್ನೋದು ಸ್ವಯಂ ಆಗಿ ಹಾಕಿಕೊಳ್ಳಬೇಕಿದೆ. ಇದನ್ನ ಹೇಳಲು ಪ್ರಧಾನಿನೇ ಬರಬೇಕಾಗಿಲ್ಲ. ಇನ್ಯಾರೋ ಬಂದು ಎಚ್ಚರಿಸಬೇಕಿಲ್ಲ. ಈಗ ಎಚ್ಚೆತ್ತುಕೊಳ್ಳದೆ ಹೋದರೆ ಮುಂದೆ ಎಂದು ಏಳಲು ಆಗದ ಸ್ಥಿತಿಯಲ್ಲಿರುತ್ತೇವೆ ಹುಷಾರ್.




Leave a Reply

Your email address will not be published. Required fields are marked *

error: Content is protected !!