ಹಾಲು ಮಾರಾಟಗಾರರು ಸಾಮಾಜಿಕ ಕಳಕಳಿ

341

ಮಂಡ್ಯ: ಆರೋಗ್ಯ ಇಲಾಖೆಯ ಮುನ್ಸೂಚನೆಯಂತೆ ಸಾಮಾಜಿಕ ಅಂತರಕ್ಕೆ ಮಾದಾಪುರ ಗ್ರಾಮಸ್ಥರು ಮುಂದಾಗಿದ್ದಾರೆ. ಕರೋನಾ ವೈರಸ್ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತಮಗೆ ತಾವೇ ನಿರ್ಬಂಧ ಹಾಕಿಕೊಂಡು ಅಂತರ ಕಾಯ್ದು ಕೊಳ್ಳುವುದಕ್ಕಾಗಿ ಉತ್ತಮ ಉಪಾಯ ಕಂಡುಕೊಂಡಿದ್ದಾರೆ.

ಹಾಲು ಖರೀದಿಸುವ ಸಲುವಾಗಿ ಸಾಮಾನ್ಯವಾಗಿ ಮುಂಜಾನೆ ಜನದಟ್ಟಣೆ ಇರುತ್ತೆ. ಹೀಗಾಗಿ ಇದನ್ನ ತಪ್ಪಿಸಲು ಗ್ರಾಮದ ಸಮೀಪದ ಹಾಲು ಉತ್ಪಾದಕರ ಸಂಘದ ಆವರಣದ ಅಕ್ಕಪಕ್ಕದಲ್ಲಿ ನಿಲ್ಲುವ ಜಾಗವನ್ನ ಸ್ವಚ್ಛವಾಗಿಟ್ಟುಕೊಂಡು, ಸಾಮಾಜಿಕ ಅಂತರ ಮಾರ್ಕ್ ಮಾಡಿ ಹಾಲು ಸರಬರಾಜಿಗೆ ಮುಂದಾಗಿದ್ದಾರೆ.

ಕಿಕ್ಕೇರಿ ಮಾದಾಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ, ಕರೋನಾ ಮಹಾಮಾರಿಯ ಅಟ್ಟಹಾಸವನ್ನ ತಡೆಗಟ್ಟಲು ಆರೋಗ್ಯ ಇಲಾಖೆಯ ಮುನ್ಸೂಚನೆಯಂತೆ ನಡೆದುಕೊಳ್ಳಲಾಗ್ತಿದೆ. ಪ್ರತಿಯೊಬ್ಬರು ಮಸ್ಕ್ ಹಾಕಿಕೊಂಡು ಕಾರ್ಯನಿರ್ವಹಸ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಅಂತರ ಸಹ ಕಾಯ್ದುಕೊಂಡಿದ್ದಾರೆ. ಇದಕ್ಕೆ ತಾಲೂಕು ದಂಡಾಧಿಕಾರಿಗಳಾದ ಶಿವಮೂರ್ತಿ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಮಾದಾಪುರ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!