ವಿಶ್ವವನ್ನೇ ತಲ್ಲಣಗೊಳಿಸಿರುವ ಕರೋನಾ ಮೈಕ್ರೋ ಚಿತ್ರ ರಿಲೀಸ್

401

ಇಡೀ ಜಗತ್ತನ್ನು ತಲ್ಲಣಗೊಳಿಸಿರುವ ಕರೋನಾ ವೈರಸ್ ನ ಮೈಕ್ರೋಸ್ಕೋಪ್ ಚಿತ್ರಗಳನ್ನ ಭಾರತದಲ್ಲಿ ಮೊದಲ ಬಾರಿಗೆ ರಿಲೀಸ್ ಮಾಡಲಾಗಿದೆ. ಪುಣೆಯ ವಿಜ್ಞಾನಿಗಳು ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಮೂಲಕ ವಿಡಿಯೋ ಸೆರೆ ಹಿಡಿಯಲಾಗಿದ್ದು, ಇದು ಮೊದಲ ಚಿತ್ರವಾಗಿದೆ.

ಈ ಮೂಲಕ ಭಾರತದಲ್ಲಿ ಮೊದಲ ಬಾರಿಗೆ ಕರೋನಾ ವೈರಸ್ ಚಿತ್ರ ರಿಲೀಸ್ ಮಾಡಲಾಗಿದೆ. ಇದನ್ನ Indian Journal of Medical Research ನಲ್ಲಿ ಪ್ರಕಟಿಸಲಾಗಿದೆ. ವುಹಾನ್ ನಲ್ಲಿ ವೈದ್ಯಕೀಯ ಅಧ್ಯಯನ ಮಾಡ್ತಿದ್ದ ಕೇರಳ ಮೂಲದ ಮೂವರಲ್ಲಿ ಜನವರಿ 30ರಂದು ಕರೋನಾ ಪತ್ತೆಯಾಗಿತ್ತು. ಸೋಂಕಿತರ ಗಂಟಲಿನಿಂದ ವೈರಸ್ ಚಿತ್ರಗಳನ್ನ ತೆಗೆಯಲಾಗಿದೆ.

ಕೋವಿಡ್ 19 ಸೃಷ್ಟಿಸುವ ವೈರಾಣು ಸಾರ್ಸ್ ಸಿಒಪಿ2 ಹಾಗೂ ತೀವ್ರ ಉಸಿರಾಟದ ಸಿಡ್ರೋಮ್ ವೈರಾಣುಗಳಿಗೆ ಹೋಲುತ್ತವೆ. ಈ ಚಿತ್ರಗಳಿಂದ ವೈರಾಣು ಬಗ್ಗೆ ಹೆಚ್ಚಿನ ಅಧ್ಯಯನ ಸಾಧ್ಯವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!