ರಾಜ್ಯದಲ್ಲಿ ಇಂದು 378 ಕರೋನಾ ಸೋಕು ಪ್ರಕರಣ

373

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಇಂದು 378 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಈ ಮೂಲಕ 5,213ಕ್ಕೆ ಏರಿಕೆಯಾಗಿದೆ. ಇದರಲ್ಲಿ 1,968 ಜನರು ಗುಣಮುಖರಾಗಿದ್ದು, ಇನ್ನು 3,184 ಪ್ರಕರಣಗಳು ಚಾಲ್ತಿಯಲ್ಲಿವೆ.

ಇಂದು 280 ಜನರು ಡಿಸ್ಚಾರ್ಜ್ ಆಗಿದ್ದಾರೆ. 2 ಸಾವು ಸಂಭವಿಸಿದ್ದು 59ಕ್ಕೆ ಏರಿಕೆಯಾಗಿದೆ. ಇವತ್ತಿನ ಪ್ರಕರಣಗಳಲ್ಲಿ 333 ಹೊರ ರಾಜ್ಯ, 8 ವಿದೇಶ ಪ್ರಯಾಣದ ಸಂಪರ್ಕ ಹೊಂದಿವೆ. ಜಿಲ್ಲಾವಾರು ಅಂಕಿಅಂಶ ಇಲ್ಲಿದೆ.

ಉಡುಪಿ 121, ಯಾದಗಿರಿ 103, ಕಲಬುರಗಿ 69, ದಕ್ಷಿಣ ಕನ್ನಡ 24, ಬೆಂಗಳೂರು ನಗರ 18, ವಿಜಯಪುರ, ದಾವಣೆಗೆರೆಯಲ್ಲಿ ತಲಾ 6, ಬೆಳಗಾವಿ 5, ಗದಗ 4, ಮಂಡ್ಯ, ಹಾಸನ, ಧಾರವಾಡ, ಹಾವೇರಿಯಲ್ಲಿ ತಲಾ 3, ರಾಯಚೂರು, ಉತ್ತರ ಕನ್ನಡ ತಲಾ 2, ಬೀದರ, ತುಮಕೂರು, ಕೋಲಾರ, ಕೊಪ್ಪಳದಲ್ಲಿ ತಲಾ 1 ಸೋಂಕು ಪ್ರಕರಣ ದಾಖಲಾಗಿವೆ. ಹೀಗೆ ಒಟ್ಟು 378 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.


TAG


Leave a Reply

Your email address will not be published. Required fields are marked *

error: Content is protected !!