ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಬಿಟೌನ್ ಕಿಲಾಡಿ

400

ವಿಶ್ವದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಸೆಲೆಬ್ರಿಟಿಗಳ ಪಟ್ಟಿಯನ್ನ ಫೋರ್ಬ್ಸ್ ಬಿಡುಗಡೆ ಮಾಡಿದೆ. ಇದರಲ್ಲಿ ಬಿಟೌನ್ ದುನಿಯಾದ ಕಿಲಾಡಿ ನಟ ಅಕ್ಷಯಕುಮಾರ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿಯೂ ಈ ಲಿಸ್ಟ್ ನಲ್ಲಿದ್ದ ಕಿಲಾಡಿ, ಈ ಬಾರಿಯೂ ಕಾಣಿಸಿಕೊಂಡಿದ್ದಾರೆ.

2019 ಜೂನ್ ನಿಂದ ಮೇ 2020ರ ವರೆಗೆ ನಟ ಅಕ್ಷಯಕುಮಾರ 365 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಈ ಮೂಲಕ 52ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕರೋನಾ ಲಾಕ್ ಡೌನ್ ಎಫೆಕ್ಸ್ ಅಕ್ಕಿ ಕರಿಯರ್ ಮೇಲೂ ಆಗಿದೆ. ಹೀಗಾಗಿ ಕಳೆದ ಬಾರಿ 33ನೇ ಸ್ಥಾನದಲ್ಲಿದ್ದ ಅಕ್ಷಯಕುಮಾರ ಈ ಬಾರಿ 52ಕ್ಕೆ ಇಳಿದಿದ್ದಾರೆ.

ಕಿಲಿಯಾ ಜನ್ನರ್ ಮೊದಲ ಸ್ಥಾನ, ಕೆನ್ಯಾ ವೆಸ್ಟ್ ದ್ವಿತೀಯ ಸ್ಥಾನದಲ್ಲಿದ್ದಾರೆ. ರೋಜರ್ ಫೆಡರ್ 3, ಕ್ರಿಸ್ಟಿನೋ ರೂನಾಲ್ಡ್ 4 ಹಾಗೂ ಲಿಯಾನೋ ಮೆಸ್ಸಿ 5ನೇ ಸ್ಥಾನದಲ್ಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!