ಸೆಲ್ಫಿ ಸಿನಿಮಾ ಸೋಲು, ಅಕ್ಷಯ್ ಕುಮಾರ್ ಹೇಳಿದ್ದೇನು?

172

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಒಂದು ಕಾಲದಲ್ಲಿ ಬಾಲಿವುಡ್ ಚಿತ್ರಗಳು ಹಿಟ್ ಮೇಲೆ ಹಿಟ್ ಆಗುತ್ತಿದ್ದವು. ಆಗ ನಟ, ನಟಿಯರ ಕಾಲುಗಳು ನೆಲದ ಮೇಲೆಯೇ ನಿಲ್ಲುತ್ತಿರಲಿಲ್ಲ. ಹೀಗಾಗಿ ಇತರೆ ಭಾಷೆಗಳ ಚಿತ್ರಗಳ ಬಗ್ಗೆ ಅಸಡ್ಡೆ ಹೊಂದಿದ್ದರು. ಆದರೆ, ಉಲ್ಟಾ ಆಗಿದೆ. ಹಿಂದಿ ಚಿತ್ರರಂಗದ ಸ್ಟಾರ್, ಸೂಪರ್ ಸ್ಟಾರ್ ನಟ, ನಟಿಯರ ಚಿತ್ರಗಳು ಮಕಾಡೆ ಮಲಗುತ್ತಿವೆ.

ಕಳೆದ ಕೆಲ ವರ್ಷಗಳಿಂದ ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಸ್ಟಾರ್ ನಟರ ಚಿತ್ರಗಳ ಸಾಲಿಗೆ ಅಕ್ಷಯ್ ಕುಮಾರ್ ನಟನೆಯ ಸೆಲ್ಫಿ ಚಿತ್ರ ಸೇರ್ಪಡೆಯಾಗಿದೆ. ಎರಡು ದಿನಗಳ ಹಿಂದೆ ಬಿಡುಗಡೆಯಾದ ಸಿನಿಮಾ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಫೇಲ್ ಆಗಿದೆ. ಇದರ ಹೊಣೆಯನ್ನು ನಟ ಹೊತ್ತಿದ್ದಾರೆ.

ನನ್ನ ಸಿನಿಮಾಗಳ ಗೆಲುವು ಎಷ್ಟಿದೆಯೋ ಸೋಲು ಅಷ್ಟಿವೆ. ನನಗೆ ಸೋಲು ಹೊಸದಲ್ಲ. ಇದರಿಂದ ಪಾಠ ಕಲಿಯುತ್ತಲೇ ಬಂದಿದ್ದೇನೆ. ಈಗಲೂ ಕಲಿಯುತ್ತೇನೆ. ಪ್ರೇಕ್ಷಕರು ಸಿನಿಮಾ ನೋಡಲಿಲ್ಲ ಎಂದು ಹೇಳುವುದಿಲ್ಲ. ಇದನ್ನು ಎಚ್ಚರಿಕೆಯ ಪಾಠವಾಗಿ ತೆಗೆದುಕೊಳ್ಳುತ್ತೇನೆ. ಇದರ ಹೊಣೆಯನ್ನು ನಾನು ಹೊರುತ್ತೇನೆ ಎಂದಿದ್ದಾರೆ. ಈ ಹಿಂದೆ ಬಿಡುಗಡೆಯಾದ ರಾಖಿ ಸಿನಿಮಾ ಸಹ ಸೋಲು ಕಂಡಿದೆ.

ಶಾರೂಕ್ ಖಾನ್ ನಟನೆಯ ಪಠಾಣ್ ಚಿತ್ರದ ಗೆಲುವು ಹಿಂದಿ ಚಿತ್ರರಂಗಕ್ಕೆ ಒಂದಿಷ್ಟು ಜೀವ ನೀಡಿದೆ. ಆದರೂ, ಸ್ಟಾರ್ ನಟ, ನಿರ್ದೇಶಕರಲ್ಲಿ ಸೋಲಿನ ಭಯ ಕಾಡುತ್ತಿದೆ. ದಕ್ಷಿಣ ಭಾರತದ ಚಿತ್ರಗಳ ಮುಂದೆ ಹಿಂದಿ ಸಿನಿಮಾಗಳು ಕಳೆದು ಹೋಗುತ್ತಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರಗಳ ಎದುರು ನಿಂತುಕೊಳ್ಳಲು ಹೆಣಗಾಡುತ್ತಿರುವುದು ಮಾತ್ರ ಸತ್ಯ.




Leave a Reply

Your email address will not be published. Required fields are marked *

error: Content is protected !!