ಪ್ರಧಾನಿ ನಿವಾಸದ ಮೇಲೆ ಡ್ರೋನ್ ಪತ್ತೆ!

266

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿಯವರ ಅಧಿಕೃತ ನಿವಾಸದ ಮೇಲೆ ಡ್ರೋನ್ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ಈ ಕುರಿತು ದೆಹಲಿ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ. ವಿಶೇಷ ಸಂರಕ್ಷಣಾ ತಂಡದ ಅಧಿಕಾರಿಗಳು ನಸುಕಿನ ಜಾವ ಡ್ರೋನ್ ಹಾರಾಡುವುದನ್ನು ಪತ್ತೆ ಮಾಡಿದ್ದಾರೆ.

ಈ ಕುರಿತು ಕೂಡಲೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದರು. ಡ್ರೋನ್ ಪತ್ತೆ ಹಚ್ಚುವ ಶೋಧ ಕಾರ್ಯ ನಡೆಸಲಾಯಿತು. ಆದರೆ, ಇದುವರೆಗೂ ಯಾವುದೇ ಡ್ರೋನ್ ಪತ್ತೆಯಾಗಿಲ್ಲ. ಪ್ರಧಾನಿಯವರ ಅಧಿಕೃತ ನಿವಾಸ ಕೆಂಪು ಹಾರಾಟ ನಿಷೇಧ ಪ್ರದೇಶವಾಗಿದೆ. ಇಲ್ಲಿ ಡ್ರೋನ್ ಅಥವ ಬೇರೆ ಯಾವುದೇ ಹಾರಾಟ ವಸ್ತುಗಳಿಗೆ ನಿಷೇಧ ಇರುತ್ತೆ.




Leave a Reply

Your email address will not be published. Required fields are marked *

error: Content is protected !!