ವಿಪಕ್ಷ ನಾಯಕನಿಲ್ಲದೇ ಅಧಿವೇಶನಕ್ಕೆ ಹೊರಟ ಬಿಜೆಪಿ!

168

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ ಅಧಿವೇಶನ ಪ್ರಾರಂಭವಾಗಿದ್ದರೂ ವಿಪಕ್ಷ ನಾಯಕನ ಆಯ್ಕೆ ಮಾಡದ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಮಧ್ಯಾಹ್ನ 12ಗಂಟೆ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಷ್ಟರೊಳಗೆ ಏನಾದರೂ ಬೆಳವಣಿಗೆ ಆಗುತ್ತಾ ಕಾದು ನೋಡಬೇಕು.

ಘಟಾನುಘಟಿ ನಾಯಕರನ್ನು ಹೊಂದಿದ ಬಿಜೆಪಿಗೆ ಇವತ್ತಿನ ಪರಿಸ್ಥಿತಿ ನಿಜಕ್ಕೂ ದುಸ್ಥಿತಿ ಎನ್ನಬಹುದು. ಸೋಲಿನ ಶಾಕ್ ನಿಂದ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಇನ್ನೂ ಹೊರ ಬಂದಿಲ್ಲ ಎನಿಸುತ್ತಿದೆ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ಮಾಡಲು ಆಗದೆ ಆಡಳಿತ ಪಕ್ಷದ ನಾಯಕರಿಂದ ಮತ್ತಷ್ಟು ಅವಮಾನಕ್ಕೆ ಒಳಗಾಗುತ್ತಿದೆ.

ಬಜೆಟ್ ಅಧಿವೇಶನ ಹೊತ್ತಿನಲ್ಲಿಯೂ ವಿಪಕ್ಷ ನಾಯಕನಿಲ್ಲದ ಪರಿಸ್ಥಿತಿ ಇತ್ತೀಚಿನ ವರ್ಷಗಳಲ್ಲಿ ಬಂದಿಲ್ಲ ಎನ್ನಲಾಗುತ್ತಿದೆ. ರಾಜ್ಯ ಬಿಜೆಪಿ ಪರಿಸ್ಥಿತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ದಕ್ಷಿಣ ಕರ್ನಾಟಕ ಭಾಗದವರಿಗೆ ಕೊಡಬೇಕಾ, ಉತ್ತರ ಕರ್ನಾಟಕ ಭಾಗದವರಿಗೆ ಕೊಡಬೇಕಾ, ಅವರಿಗಾ, ಇವರಿಗಾ ಅನ್ನೋ ಚರ್ಚೆಯಲ್ಲಿಯೇ ಬಿಜೆಪಿ ಮುಳುಗಿದ್ದು, ಒಂದು ನಿರ್ಧಾರಕ್ಕೆ ಬರದ ಸ್ಥಿತಿ ನಿರ್ಮಾಣವಾಗಿರುವುದು ಪಕ್ಷದ ಕಾರ್ಯಕರ್ತರಲ್ಲೂ ಬೇಸರ ತರಿಸಿದೆ. ದಿಢೀರ್ ಬೆಳವಣಿಗೆ ಏನಾದರೂ ಆಗುತ್ತಾ ನೋಡಬೇಕು.




Leave a Reply

Your email address will not be published. Required fields are marked *

error: Content is protected !!