ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇಷ್ಟು ದಿನಗಳ ಕಾಲ ಕರೋನಾ ಚಿಕಿತ್ಸೆಯನ್ನ ಸರ್ಕಾರಿಯ ನಿಗದಿತ ಆಸ್ಪತ್ರೆಯಲ್ಲಿ ನೀಡಿಕೊಂಡು ಬರಲಾಗ್ತಿದೆ. ಇದೀಗ ಖಾಸಗಿ ಆಸ್ಪತ್ರೆಗಳಲ್ಲಿಯೂ ಚಿಕಿತ್ಸೆ ನೀಡುವ ಸಂಬಂಧ, ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿದೆ. ಜನರಲ್ ವಾರ್ಡ್ ನಲ್ಲಿ ಒಂದು ದಿನದ ಚಿಕಿತ್ಸೆಗೆ 5,200 ರೂಪಾಯಿ, ಐಸೋಲೇಷನ್ ವಾರ್ಡ್ 8,500, ಐಸಿಯು ಜೊತೆಗೆ ವೆಂಟಿಲೇಟರ್ ಆದ್ರೆ 12 ಸಾವಿರ, ಜನರಲ್ ವಾರ್ಡ್ ಜೊತೆ ವೆಂಟಿಲೇಟರ್ ಆದ್ರೆ 7,500 ಹಾಗೂ ಸ್ವಾ ಟೆಸ್ಟ್ ಗೆ 2,600 ರೂಪಾಯಿ ದರ ನಿಗದಿ ಮಾಡಲಾಗಿದೆ ಅನ್ನೋ ಮಾಹಿತಿ ಬಂದಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬೇಕಿದೆ.
ಇನ್ನೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಇದರ ಜೊತೆಗೆ ಸಾಮಾನ್ಯ ಆಸ್ಪತ್ರೆಗಳಲ್ಲಿಯೂ ಕರೋನಾ ಚಿಕಿತ್ಸೆ ನೀಡುವ ಸಂಬಂಧ ಚಿಂತನೆ ನಡೆದಿದೆ ಎಂದು ಹೇಳಲಾಗ್ತಿದೆ. ಯಾಕಂದ್ರೆ, ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗ್ತಿದ್ದು, ಆತಂಕ ಮೂಡಿಸಿದೆ ಎಂದು ವೈದ್ಯಕೀಯ ಸಚಿವ ಡಾ.ಕೆ ಸುಧಾಕರ ಹೇಳಿದ್ದಾರೆ.