3ನೇ ಸ್ಥಾನಕ್ಕೆ ಬಂದ ಭಾರತದಲ್ಲೆಷ್ಟು ಸೋಂಕಿತರು?

312

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಯೆಸ್, ಕರೋನಾ ಸೋಂಕಿತರ ಪಟ್ಟಿಯಲ್ಲಿ ಭಾರತ ಇದೀಗ 3ನೇ ಸ್ಥಾನಕ್ಕೆ ಬಂದಿದೆ. ರಷ್ಯವನ್ನ ಹಿಂದಿಕ್ಕಿ 3ನೇ ಸ್ಥಾನದಲ್ಲಿ ಬಂದು ಕುಳಿತಿದೆ. ಇದು ಖುಷಿಯ ವಿಚಾರವಲ್ಲ. ನೋವಿನ ಸಂಗತಿಯಾಗಿದೆ. ಕಳೆದ 24 ಗಂಟೆಯಲ್ಲಿ 24,248 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈಗ ಭಾರತದಲ್ಲಿ 6,97,836 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 4,24,891 ಜನ ಗುಣಮುಖರಾಗಿದ್ದು, 2,53,245 ಪ್ರಕರಣಗಳು ಚಾಲ್ತಿಯಲ್ಲಿವೆ. ಇನ್ನು 24ಗಂಟೆಯಲ್ಲಿ 425 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ 19,700ಕ್ಕೆ ಏರಿಕೆಯಾಗಿದೆ. ಈ ಮೂಲಕ ಭಾರತ ಈಗ ವಿಶ್ವದಲ್ಲಿ ಅತಿ ಹೆಚ್ಚು ಸೋಂಕು ಹೊಂದಿರುವ ದೇಶಗಳಲ್ಲಿ 3ನೇ ಸ್ಥಾನದಲ್ಲಿದೆ.

ಅಮೆರಿಕ 29,82,928 ಜನರಲ್ಲಿ ಸೋಂಕು, 1,32,569 ಸಾವು. ಬ್ರೆಜಿಲ್ 16,04,585 ಜನರಲ್ಲಿ ಕೋವಿಡ್ 19 ಕಾಣಿಸಿಕೊಂಡಿದೆ. 64,900 ಜನರು ಸಾವನ್ನಪ್ಪಿದ್ದಾರೆ. 4ನೇ ಸ್ಥಾನಕ್ಕೆ ಇಳಿದಿರುವ ರಷ್ಯದಲ್ಲಿ 6,81,251 ಜನರಿಗೆ ಸೋಂಕು ತಗುಲಿದೆ. 10,161 ಜನರು ಸಾವನ್ನಪ್ಪಿದ್ದಾರೆ.

ಇದುವರೆಗೂ ಜಗತ್ತಿನಲ್ಲಿ 1 ಕೋಟಿ 15 ಲಕ್ಷ 63 ಸಾವಿರದ 4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 67 ಲಕ್ಷ 37 ಸಾವಿರದ 765 ಜನರು ಗುಣಮುಖರಾಗಿದ್ದಾರೆ. 5 ಲಕ್ಷದ 36 ಸಾವಿರದ 843 ಜನರು ಸಾವನ್ನಪ್ಪಿದ್ದಾರೆ.




Leave a Reply

Your email address will not be published. Required fields are marked *

error: Content is protected !!