ಆಮೀರ್ ಸಿಬ್ಬಂದಿಗೆ ಕೋವಿಡ್ 19: ಆತಂಕದಲ್ಲಿ ಕುಟುಂಬಸ್ಥರು

310

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಟ ಆಮೀರ್ ಖಾನ್ ಸಿಬ್ಬಂದಿಗೆ ಕರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸ್ವತಃ ನಟ ಆಮೀರ್ ತಿಳಿಸಿದ್ದಾರೆ. ತಮ್ಮ ಸಿಬ್ಬಂದಿಗೆ ಕೋವಿಡ್ 19 ಬಂದಿದ್ದು, ಅವರನ್ನ ತಕ್ಷಣ ಕ್ವಾರಂಟೈನ್ ಮಾಡಲಾಗಿದೆ. ಬಿಎಂಸಿ ಅಧಿಕಾರಿಗಳು ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಆಮೀರ್ ಕುಟುಂಬದವರನ್ನ ಸಹ ಪರೀಕ್ಷೆ ಮಾಡಲಾಗಿದೆ. ಇವರ ತಾಯಿ ಹೊರತಾಗಿ ಎಲ್ಲರ ವರದಿ ಬಂದಿದ್ದು, ನೆಗಟಿವ್ ಎಂದು ಬಂದಿದೆ. ಹೀಗಾಗಿ ತಮ್ಮ ತಾಯಿಯ ವರದಿಯೂ ನೆಗಟಿವ್ ಬರಲಿ ಎಂದು ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ.

ತಮ್ಮನ್ನು ಚೆನ್ನಾಗಿ ನೋಡಿಕೊಂಡ ಮುಂಬೈ ಮುನ್ಸಿಪಲ್ ಕಾರ್ಪೂರೇಷನ್ ಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಆಸ್ಪತ್ರೆಯ ವ್ಯವಸ್ಥೆ ಚೆನ್ನಾಗಿದೆ. ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ಇನ್ನು ಇದೀಗ ಇವರ ತಾಯಿಯ ವರದಿಗಾಗಿ ಕಾಯಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!