ಬೆಂಗಳೂರು-ಕೊಲ್ಕತ್ತಾ ಫೈಟ್: ಚಾಲೆಂಜರ್ಸ್ ಫಸ್ಟ್ ಬ್ಯಾಟಿಂಗ್

378

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶಾರ್ಜನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಭರ್ಜರಿ ಫೈಟ್ ನಡೆಯಲಿದೆ. ಆರ್ ಸಿಬಿ ಕ್ಯಾಪ್ಟನ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಹಿಂದಿನ ಪಂದ್ಯದಲ್ಲಿ 90 ರನ್ ಬಾರಿಸಿರುವ ಕೊಹ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಇನ್ನು ಪಡಿಕಲ್, ಎಬಿಡಿ, ಪಿಂಚ್, ವಾಸಿಂಗ್ಟನ್ ಸುಂದರ್ ಸಹ ಭರ್ಜರಿ ಆಟವಾಡಿದ್ರೆ 200ರ ಗಡಿ ದಾಟುವುದರಲ್ಲಿ ಅನುಮಾನವೇ ಇಲ್ಲ. ಚಹಾಲ್, ಉದಾನ್, ಸೈನಿ ಬೌಲಿಂಗ್ ಸಹ ದಿನೇಶ ಕಾರ್ತಿಕ ಬಳಗವನ್ನ ಕಾಡಲಿದೆ.

ಇನ್ನು ಸತತ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ದಿನೇಶ ಕಾರ್ತಿಕ ಟೀಂ, ಆರ್ ಸಿಬಿಯನ್ನ ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಲೆಕ್ಕಾಚಾರದಲ್ಲಿದೆ. ಕೊಲ್ಕತ್ತಾ ಬೌಲರ್ ಗಳು ಬೆಂಗಳೂರು ಆಟಗಾರರನ್ನ ಹೇಗೆ ಆಡಿಸ್ತಾರೆ ಅನ್ನೋ ಕುತೂಹಲವಿದೆ. ಇನ್ನು ಸುಬನಂ ಗಿಲ್, ತ್ರಿಪಾಠಿ, ಕಾರ್ತಿಕ, ರಾಣಾ, ಮಾರ್ಗನ್ ಸಹ ಭರ್ಜರಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. 7.30ಕ್ಕೆ ಪಂದ್ಯ ಶುರುವಾಗಲಿದೆ.




Leave a Reply

Your email address will not be published. Required fields are marked *

error: Content is protected !!