ಆರ್ ಸಿಬಿ ಬೌಲಿಂಗ್ ಗೆ ಬೆದರಿದ ಕೆಕೆಆರ್

350

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಶೇಖ್ ಝಾಯೀದ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೆಕೆಆರ್ ನಡುವಿನ ಪಂದ್ಯದಲ್ಲಿ, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕೆಕೆಆರ್ ಕೇವಲ 84 ರನ್ ಬಾರಿಸಿ 85 ರನ್ ಟಾರ್ಗೆಟ್ ನೀಡಿದೆ.

ಆರ್ ಸಿಬಿ ಪಡೆಯ ಭರ್ಜರಿ ಬೌಲಿಂಗ್ ಗೆ ಬೆದರಿದ ಕೆಕೆಆರ್ ಟೀಂ 20 ಓವರ್ ಗಳಿಗೆ 8 ವಿಕೆಟ್ ಕಳೆದುಕೊಂಡು 84 ರನ್ ಮಾತ್ರ ಗಳಿಸಿದೆ. ಗಿಲ್ 1, ತ್ರಿಪಾಟಿ 1, ರಾಣಾ 0, ಬಾನ್ಟನ್ 10, ಕಾರ್ತಿಕ 4, ಕ್ಯಾಪ್ಟನ್ ಮಾರ್ಗನ್ 30, ಕಮಿನ್ಸ್ 4, ಕುಲದೀಪ ಯಾದವ 12, ಫರ್ಗೂಸನ್ 19 ರನ್ ಬಾರಿಸಿದ್ರು.

ಮಹ್ಮದ್ ಸಿರಾಜ್ ಭರ್ಜರಿ ಬೌಲಿಂಗ್ ಮಾಡಿ 3 ವಿಕೆಟ್ ಪಡೆದ್ರೆ ಚಹಲ್ 2, ಸೈನಿ ಹಾಗೂ ಸುಂದರ ತಲಾ 1 ವಿಕೆಟ್ ಪಡೆದ್ರು.




Leave a Reply

Your email address will not be published. Required fields are marked *

error: Content is protected !!