ರಾಜ್ಯದಲ್ಲಿಂದು 1,105 ಜನರಲ್ಲಿ ಸೋಂಕು.. ಬಳ್ಳಾರಿಯಲ್ಲಿ 12 ಸಾವು

317

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರುನಾಡಿನಲ್ಲಿಂದು 1,105 ಜನರಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸಾವಿರ ದಾಟಿದ ಎರಡನೇ ದಿನವಾಗಿದೆ. ಈ ಮೂಲಕ 14,295 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇನ್ನು 19 ಸಾವು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರ 4, ಬಳ್ಳಾರಿ 12, ದಕ್ಷಿಣ ಕನ್ನಡ 1, ಹಾಸನ 1 ಹಾಗೂ ಬಾಗಲಕೋಟೆಯಲ್ಲಿ 1 ಸಾವು ಸಂಭವಿಸಿದೆ. ಈವರೆಗೆ 226 ಜನ ಸಾವನ್ನಪ್ಪಿದ್ದಾರೆ.  176 ಜನ ಬಿಡುಗಡೆಯಾಗುವುದರೊಂದಿಗೆ 7,683 ಜನ ಡಿಸ್ಚಾರ್ಜ್ ಆಗಿದ್ದಾರೆ. 6,382 ಪ್ರಕರಣಗಳು ಚಾಲ್ತಿಯಲ್ಲಿವೆ.

ಜಿಲ್ಲಾವಾರು ಸೋಂಕಿತರ ವಿವರ ಹೀಗೆದೆ..

ಬೆಂಗಳೂರು ನಗರ 738, ಬಳ್ಳಾರಿ 76, ದಕ್ಷಿಣ ಕನ್ನಡ 32, ಬೀದರ 28, ಉತ್ತರ ಕನ್ನಡ 24, ಕಲಬುರಗಿ 23,  ಹಾಸನ 22, ವಿಜಯಪುರ 22, ತುಮಕೂರು 18, ಉಡುಪಿ 18, ಧಾರವಾಡ 17, ಚಿಕ್ಕಮಗಳೂರು 17, ಚಿಕ್ಕಬಳ್ಳಾಪುರ 15, ಯಾದಗಿರಿ 9, ಮಂಡ್ಯ 8, ಮೈಸೂರು 6, ಶಿವಮೊಗ್ಗ 5, ರಾಯಚೂರು 4, ಬಾಗಲಕೋಟೆ 4, ಗದಗ 4, ಕೋಲಾರ 4, ಬೆಂ.ಗ್ರಾ 3, ದಾವಣಗೆರೆ 2, ರಾಮನಗರ 2, ಚಿತ್ರದುರ್ಗ 2, ಹಾವೇರಿ 1 ಹಾಗೂ ಕೊಡಗಿನಲ್ಲಿ 1 ಕೇಸ್ ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!