ಗದಗನಲ್ಲಿ ಕರೋನಾಗೆ ವೃದ್ಧೆ ಬಲಿ.. 24 ಗಂಟೆಯಲ್ಲಿ ಸತ್ತವರೆಷ್ಟು ಗೊತ್ತಾ?

336

ಗದಗ: ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ಕರೋನಾದಿಂದಾಗಿ ವದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದು, ನಗರದ ರಂಗನವಾಡಿ ನಿವಾಸಿಯಾದ 80 ವರ್ಷದ ವೃದ್ಧೆ ಬುಧವಾರ ಮಧ್ಯರಾತ್ರಿ 12.55ಕ್ಕೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 4ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಯನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಪ್ರಿಲ್ 6ರಂದು ಕರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಗ ಮಲ್ಲ ಸಮುದ್ರದ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ತಡರಾತ್ರಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದ್ದಾರೆ.

ವೃದ್ಧೆಯ ಸಾವಿನೊಂದಿಗೆ ರಾಜ್ಯದಲ್ಲಿ 6 ಜನ ಕರೋನಾಗೆ ಬಲಿಯಾಗಿದ್ದಾರೆ. ಇನ್ನು ದೇಶದಲ್ಲಿ 24 ಗಂಟೆಯಲ್ಲಿ 17 ಜನ ಸಾವನ್ನಪ್ಪಿದ್ದಾರೆ. 540 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಏಪ್ರಿಲ್ 9ರ 9 ಗಂಟೆಯವರೆಗಿನ ವರದಿ ಪ್ರಕಾರ 5,734 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಅನ್ನೋದು ಆರೋಗ್ಯ ಇಲಾಖೆ ವರದಿಯಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!