ಲಾಕ್ ಡೌನ್: ಪತ್ನಿ, ಮಗುವಿಗಾಗಿ ನದಿಗೆ ಹಾರಿ ಪ್ರಾಣ ಕಳೆದುಕೊಂಡವನ ದಾರುಣ ಕಥೆ..

421

ವಿಜಯಪುರ: ಕರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲ ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಹೀಗಾಗಿ ಯಾರನ್ನೂ ಒಳಗೆ ಹೊರಗೆ ಹೋಗಲು ಬಿಡ್ತಿಲ್ಲ. ಇಂದ್ರಿಂದಾಗಿ ವ್ಯಕ್ತಿಯೊಬ್ಬ ನದಿ ದಾಟಲು ಹೋಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.

ಚೆಕ್ ಪೋಸ್ಟ್ ನಲ್ಲಿ ಬಿಡುವುದಿಲ್ಲವೆಂದು ತಿಳಿದುಕೊಂಡು ಹುಚ್ಚು ಸಾಹಸಕ್ಕೆ ಕೈ ಹಾಕಿದ ಪರಿಣಾಮ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಕೃಷ್ಣಾ ನದಿಯಲ್ಲಿ ಅನಾಹುತ ನಡೆದಿದೆ. 45 ವರ್ಷದ ಮಲ್ಲಪ್ಪ ಬೊಮ್ಮಣಗಿ ಪ್ರಾಣ ಕಳೆದುಕೊಂಡಿದ್ದಾನೆ.

ಪತ್ನಿ ಹಾಗೂ ಮಗುವಿನ ಮುಖ ನೋಡುವ ಸಲುವಾಗಿ, ಚೆಕ್ ಪೋಸ್ಟ್ ತಪ್ಪಿಸಿಕೊಂಡು ಕೃಷ್ಣಾ ನದಿಗೆ ಜಿಗಿದು ದಾಟಲು ಹೋಗಿದ್ದಾನೆ. ಆದ್ರೆ, ನದಿ ದಾಟಲು ಆಗದೆ ಪ್ರಾಣ ಕಳೆದುಕೊಂಡಿದ್ದಾನೆ. ಹುನಗುಂದ ತಾಲೂಕಿನ ಹುಲ್ಲಳ್ಳಿ ಗ್ರಾಮದ ಮಲ್ಲಪ್ಪ ಬೊಮ್ಮಣಗಿ ಕೆಎಸ್ಆರ್ ಟಿಸಿ ನಿರ್ವಾಹಕನಾಗಿ ಕೆಲಸ ಮಾಡ್ತಿದ್ದ. ಪತ್ನಿ ಊರಾದ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮ ಬರುವ ಸಲುವಾಗಿ ನದಿ ದಾಟಲು ಹೋಗಿ ಪ್ರಾಣ ಕಳೆದುಕೊಂಡಿದ್ದಾಣೆ.

ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ನಿಜಕ್ಕೂ ಕರುಣಾಜನಕ ಕಥೆ. ಕರೋನಾ ಅನ್ನೋದು ಬರೀ ರೋಗದಿಂದ ಸಾಯಿಸುತ್ತಿಲ್ಲ. ಅದರಿಂದ ಸೃಷ್ಟಿಸಿಯಾದ ಪರಿಸ್ಥಿತಿಗೆ ಮುಗ್ಧ ಜೀವಗಳು ಸಹ ಬಲಿಯಾಗ್ತಿರುವುದು ದುರಂತದ ಸಂಗತಿ.




Leave a Reply

Your email address will not be published. Required fields are marked *

error: Content is protected !!