ದೇಶದಲ್ಲಿ ಕರೋನಾ ಸಾವಿನ ಸಂಖ್ಯೆ 2000 ದಾಟಿತು

306

ನವದೆಹಲಿ: ದೇಶದಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದಕ್ಕೆ ಜನರು ಸಹ ಅಷ್ಟೇ ಕಾರಣವಾಗಿದ್ದಾರೆ. ರೋಗ ಕಡಿಮೆಯಾಗಬೇಕು ಅನ್ನೋ ಜನ, ಅದಕ್ಕೆ ತಕ್ಕಂತೆ ಪಾಲಿಸಬೇಕಾದ ನಿಯಮಗಳನ್ನ ಪಾಲಿಸುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಇದೀಗ ದೇಶದಲ್ಲಿ ಕರೋನಾ ಸಾವಿನ ಸಂಖ್ಯೆ 2 ಸಾವಿರ ಆಗಿದೆ.

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 95 ಮಂದಿ ಸಾವನ್ನಪ್ಪಿದ್ದು ಈ ಮೂಲಕ ಸಾವಿನ ಸಂಖ್ಯೆ 2 ಸಾವಿರಕ್ಕೆ ಏರಿಕೆಯಾಗಿದೆ. 3,320 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದು 60 ಸಾವಿರ ಮುಟ್ಟಿದೆ. ಕಳೆದೊಂದು ವಾರದಿಂದ ಸರಾಸರಿ ಪ್ರತಿನಿತ್ಯ 3 ಸಾವಿರ ಜನರಲ್ಲಿ ಸೋಂಕು ಕಾಣಿಸಿಕೊಳ್ತಿದೆ. ಕೋವಿಡ್ 19ನಿಂದ ಗುಣಮುಖರಾಗ್ತಿರುವವರ ಸಂಖ್ಯೆ ಹೆಚ್ಚಾಗ್ತಿದ್ರೂ, ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಾಣ್ತಿಲ್ಲ.

ಇದಕ್ಕೆ ಲಾಕ್ ಡೌನ್ ಸಡಿಲಿಕೆಯೂ ಒಂದು ಕಾರಣವಾಗಿದೆ. ಯಾಕಂದ್ರೆ, ನಮ್ಮ ಜನಕ್ಕೆ ಸ್ವಲ್ಪ ಲೂಸ್ ಬಿಟ್ರೆ ಸಾಕು ತಲೆ ಮೇಲೆ ಕುಳಿತುಕೊಳ್ತಾರೆ. ಇದೀಗ ಆಗಿರುವುದು ಅದೆ ಅನ್ನೋದು ಸತ್ಯ. ಮುಂದಿನ ದಿನಗಳಲ್ಲಿಯೂ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.




Leave a Reply

Your email address will not be published. Required fields are marked *

error: Content is protected !!