ಚಾನೆಲ್ ವೊಂದರ ವಿರುದ್ಧ ಕೆಜಿಎಫ್ ಟೀಂ ಕಾನೂನು ಹೋರಾಟ

862

ಕನ್ನಡದ ಕೆಜಿಎಫ್ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದು ಎಲ್ಲರಿಗೂ ಗೊತ್ತಿದೆ. ನಟ ಯಶ ಅಭಿನಯದ ಮೂವಿ ಸೂಪರ್ ಹಿಟ್ ಆಗಿದೆ. ಪ್ರಶಾಂತ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 2 ರಿಲೀಸ್ ಗೆ ಪ್ಲಾನ್ ನಡೆಯುತ್ತಿರುವ ಹೊತ್ತಿನಲ್ಲಿ ಚಾನೆಲ್ ವೊಂದರ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ.

ಇಷ್ಟಕ್ಕೂ ಕಾನೂನು ಹೋರಾಟ ಯಾಕೆ ಅಂದ್ರೆ, ಕೆಜಿಎಫ್ ಚಾಪ್ಟರ್ 1 ಚಿತ್ರವನ್ನ ತೆಲುಗಿನ ಲೋಕಲ್ ಚಾನೆಲ್ ವೊಂದು ಪ್ರಸಾರ ಮಾಡಿದೆ. ಟಿವಿ ರೈಟ್ಸ್ ಮಾರಾಟವಾಗಿಲ್ಲ. ಅದರ ಮಾತುಕತೆ ನಡೆಯುತ್ತಿದೆ. ಹೀಗಿರುವಾಗ ಚಿತ್ರವನ್ನ ಪ್ರಸಾರ ಮಾಡಿದ್ದು ಹೇಗೆ? ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡಬೇಕಾಗುತ್ತೆ ಎಂದು ಹೊಂಬಾಳೆ ಬ್ಯಾನರ್ ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕಗೌಡ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇನ್ನು ಟ್ವೀಟ್ ಗೆ ಹಲವಾರು ಜನ ಕಾಮೆಂಟ್ಸ್ ಮಾಡಿದ್ದಾರೆ. ಸಿನ್ಮಾ ರಿಲೀಸ್ ಆಗಿ ಒಂದೂವರೆ ವರ್ಷವಾದ್ರೂ ಟಿವಿ ರೈಟ್ಸ್ ಸೇಲ್ ಆಗಿಲ್ಲಂದ್ರೆ ಹೇಗೆ ಅಂದಿದ್ದಾರೆ. ಇದೇನೂ ಹೊಸದಲ್ಲ. ಈ ಹಿಂದೆಯೂ ಹೀಗೆ ಹಲವು ಆಗಿವೆ ಎಂದಿದ್ದಾರೆ. ಇನ್ನೂ ಕೆಲವರು ಕೆಜಿಎಫ್ ಟೀಂ ಕಾಲೆಳೆದಿದ್ದಾರೆ. ಇನ್ನು ಕೆಜಿಎಫ್-2 ರಿಲೀಸ್ ಅಕ್ಟೋಬರ್ 23 ಎನ್ನಲಾಗ್ತಿದೆ. ಇದು ಮುಂದಕ್ಕೆ ಹೋಗುವ ಸಾಧ್ಯತೆ ಸಹ ಇದೆಯಂತೆ.




Leave a Reply

Your email address will not be published. Required fields are marked *

error: Content is protected !!