ಕಬ್ಜ ಟೀಸರ್ ಮತ್ತು ಕೆಜಿಎಫ್ ಫೀಲ್..!

168

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ನಟನೆಯ ಕಬ್ಜ ಚಿತ್ರದ ಟೀಸರ್ ಶನಿವಾರ ಸಂಜೆ ಬಿಡುಗಡೆಯಾಗಿದೆ. ಟೀಸರ್ ನೋಡಿದ ಪ್ರತಿಯೊಬ್ಬರ ಕಣ್ಮುಂದೆ ಬರುವುದು ಬ್ಲಾಕ್ ಬ್ಲಸ್ಟರ್ ಕೆಜಿಎಫ್ ಮೂವಿ. ಕಾರಣ, ಅದೇ ಗ್ರೇ ಸೇಡ್ ನಲ್ಲಿರುವ ಟೀಸರ್ ತುಂಬಾ ಕೆಜಿಎಫ್ ಕಥೆಯಂತೆ ಕಾಣುವ ದೃಶ್ಯಗಳು.

ಸಾವಿರಾರು ಕೂಲಿ ಕಾರ್ಮಿಕರು, ದಬ್ಬಾಳಿಕೆ, ಬೆಟ್ಟ ಗುಡ್ಡದ ಕಣಿವೆ.. ರಾಜಕೀಯ.. ಕಥೆಯ ಕೇಂದ್ರವಾಗಿರುವ ತಾಯಿ, ಬಾಲಕ, ಮುಂದೆ ಗ್ಯಾಂಗ್ ಸ್ಟರ್ ಆಗುವ ಪರಿ.. ಹೀಗಾಗಿ ಟೀಸರ್ ನೋಡಿದವರು ಕೆಜಿಎಫ್ ಫೀಲ್ ಬರುತ್ತಿದೆ ಅನ್ನುತ್ತಿದ್ದಾರೆ. ಮತ್ತೆ ಕೆಲವರು ಬರೀ ಟೀಸರ್ ನೋಡಿ ಕಥೆ ಗೆಸ್ ಮಾಡಬೇಡಿ. ಕನ್ನಡ ಸಿನಿಮಾ ಮತ್ತೊಂದು ಲೆವಲ್ ನಲ್ಲಿದೆ. ಕಬ್ಜ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ ಎಂದಿದ್ದಾರೆ.

ಸುಮಧುರವಾದ ಪ್ರೇಮದ ಕಥೆಗಳನ್ನು ಹೇಳಿ ಗೆದ್ದಿರುವ ಆರ್.ಚಂದ್ರು ಈ ಬಾರಿ ಮತ್ತೊಂದು ಜಾನರ್ ಸಿನಿಮಾ ಮಾಡುತ್ತಿದ್ದಾರೆ. ಇದರಲ್ಲಿ ಇಬ್ಬರು ಸ್ಟಾರ್ ನಟರು, ಸೌಥ್ ನಟಿ ಶ್ರೇಯಾ ಶರಣ್ ಇದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕಬ್ಜ ಇಡೀ ಇಂಡಿಯನ್ ಸಿನಿಮಾವನ್ನು ಕಬ್ಜ ಮಾಡಿಕೊಳ್ಳಲಿ ಅನ್ನೋದು ಎಲ್ಲರ ಆಶಯ.




Leave a Reply

Your email address will not be published. Required fields are marked *

error: Content is protected !!